Sunday, September 20, 2026
spot_img
More
    spot_img
    HomeLatest newsನಮ್ಮ ಸಂಸ್ಕೃತಿಗೆ ಜಾಗತಿಕ ಗೌರವ;ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿದ ‘ಬೆಳಕಿನ ಹಬ್ಬ’ ದೀಪಾವಳಿ!

    ನಮ್ಮ ಸಂಸ್ಕೃತಿಗೆ ಜಾಗತಿಕ ಗೌರವ;ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿದ ‘ಬೆಳಕಿನ ಹಬ್ಬ’ ದೀಪಾವಳಿ!

    ನವದೆಹಲಿ: ಭಾರತದ ಅತ್ಯಂತ ಪ್ರೀತಿಯ ಮತ್ತು ಪ್ರಮುಖ ಹಬ್ಬವಾದ ದೀಪಾವಳಿಗೆ ಈಗ ವಿಶ್ವಮಟ್ಟದ ಮನ್ನಣೆ ಸಿಕ್ಕಿದೆ! ನಮ್ಮ ‘ಬೆಳಕಿನ ಹಬ್ಬ’ ವನ್ನು ಯುನೆಸ್ಕೋದ (UNESCO) ಪ್ರಮುಖ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಬುಧವಾರ ಅಧಿಕೃತವಾಗಿ ಸೇರಿಸಲಾಗಿದೆ. ಇದು ನಮ್ಮ ಭಾರತೀಯ ಸಂಸ್ಕೃತಿಗೆ ಸಿಕ್ಕಿರುವ ಬಹುದೊಡ್ಡ ಗೌರವ!

    Advertisement

    ಈಗಾಗಲೇ ಯುನೆಸ್ಕೋ ಪಟ್ಟಿಯಲ್ಲಿ ನಮ್ಮ ದೇಶದ 15 ಅದ್ಭುತ ಸಾಂಸ್ಕೃತಿಕ ಅಂಶಗಳಿದ್ದವು. ಈಗ ದೀಪಾವಳಿಯ ಸೇರ್ಪಡೆಯೊಂದಿಗೆ ಈ ಸಂಖ್ಯೆ 16 ಕ್ಕೆ ಏರಿದೆ.ಈ ಪಟ್ಟಿಯಲ್ಲಿ ಯೋಗ, ಕುಂಭಮೇಳ, ಕೋಲ್ಕತ್ತಾ ದುರ್ಗಾ ಪೂಜಾ ಮತ್ತು ಇತ್ತೀಚೆಗೆ ಸೇರಿದ ಗುಜರಾತ್‌ನ ಗರ್ಬಾ ನೃತ್ಯದಂತಹ ಪ್ರಮುಖ ಅಂಶಗಳು ಇವೆ.ಈ ಮಹತ್ವದ ನಿರ್ಧಾರವನ್ನು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಡಿಸೆಂಬರ್ 8 ರಿಂದ 13ರ ವರೆಗೆ ನಡೆಯುತ್ತಿರುವ ಯುನೆಸ್ಕೋ ಅಂತರರಾಷ್ಟ್ರೀಯ ಸಮಿತಿಯ ವಾರ್ಷಿಕ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ಭಾರತವು ಯುನೆಸ್ಕೋದ ಈ ಸಮಿತಿಯ ಅಧಿವೇಶನಕ್ಕೆ ಮೊದಲ ಬಾರಿಗೆ ಆತಿಥ್ಯ ವಹಿಸಿದೆ ಎಂಬುದು ವಿಶೇಷ.ಈ ಐತಿಹಾಸಿಕ ಸಂದರ್ಭವನ್ನು ಆಚರಿಸಲು ದೆಹಲಿ ಸರ್ಕಾರವು ಭರ್ಜರಿ ತಯಾರಿ ನಡೆಸಿದೆ. ರಾಜಧಾನಿಯ ಎಲ್ಲಾ ಮುಖ್ಯ ಕಟ್ಟಡಗಳಿಗೆ ದೀಪಾಲಂಕಾರ ಮಾಡಿ, ಸಾರ್ವಜನಿಕ ಸ್ಥಳಗಳನ್ನು ಬೆಳಗಿಸಿ, ದೀಪಾವಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲು ಸೂಚಿಸಲಾಗಿದೆ. ಕೆಂಪು ಕೋಟೆಯಲ್ಲಿಯೂ ದೀಪ ಬೆಳಗಿಸುವ ಸಮಾರಂಭಗಳು ಮತ್ತು ಕಲಾ ಪ್ರದರ್ಶನಗಳು ನಡೆಯುತ್ತಿವೆ.

    ಈ ಸಂತಸದ ಸುದ್ದಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತ ಮತ್ತು ವಿಶ್ವದಾದ್ಯಂತ ಜನರು ಸಂತೋಷದಿಂದ ತುಂಬಿದ್ದಾರೆ. ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಆತ್ಮ. ಈ ಗೌರವದಿಂದ ಹಬ್ಬದ ಜಾಗತಿಕ ಜನಪ್ರಿಯತೆ ಹೆಚ್ಚಾಗಲಿದೆ” ಎಂದು ಹೇಳಿದ್ದಾರೆ.194 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಅಂತರರಾಷ್ಟ್ರೀಯ ತಜ್ಞರು ಮತ್ತು ಯುನೆಸ್ಕೋ ಜಾಗತಿಕ ಜಾಲದ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಸೇರ್ಪಡೆಗೆ ಅನುಮೋದನೆ ನೀಡಲಾಯಿ

    ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಲ್ಲಿ ಪಾಲಿಯೆಸ್ಟರ್‌ ಮೋಸ! ದೇವಸ್ಥಾನಕ್ಕೆ ₹54 ಕೋಟಿ ನಷ್ಟ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading