Thursday, June 25, 2026
spot_img
More
    spot_img
    HomeLatest news2026ನೇ ಸಾಲಿನ ಸಿಬ್ಬಂದಿ, ನೌಕರರ ವರ್ಗಾವಣೆ, ಸುತ್ತೋಲೆ ಪ್ರಕಟ

    2026ನೇ ಸಾಲಿನ ಸಿಬ್ಬಂದಿ, ನೌಕರರ ವರ್ಗಾವಣೆ, ಸುತ್ತೋಲೆ ಪ್ರಕಟ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಲಬುರಗಿ ಸುತ್ತೋಲೆಯೊಂದನ್ನು ಪ್ರಕಟಿಸಿದೆ. 2026ನೇ ಸಾಲಿನ ವರ್ಗಾವಣೆ ಮಾಹಿತಿ ಹಾಗೂ ಅರ್ಜಿಗಳನ್ನು ಸಲ್ಲಿಸುವ ಬಗ್ಗೆ ಎಂಬ ವಿಷಯವನ್ನು ಇದು ಒಳಗೊಂಡಿದ್ದು, ಸರ್ಕಾರದ ಆದೇಶವನ್ನು ಉಲ್ಲೇಖಿಸಲಾಗಿದೆ.

    Advertisement

    ಈ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರಿ ಆದೇಶದನ್ವಯ 2026ನೇ ಸಾಲಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆಯನ್ನು ‘ಕರ್ನಾಟಕ ನಾಗರೀಕ ಸೇವಾ (ವೈದ್ಯಾಧಿಕಾರಿಗಳ ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು, 2025ರಡಿ ಸಮಾಲೋಚನೆ ಮೂಲಕ ನಿಗದಿತ ಕಾಲಾವಧಿಯೊಳಗಾಗಿ ಪೂರ್ಣಗೊಳಿಸಬೇಕು.

    ಇದಕ್ಕೆ ಅನುವಾಗುವಂತೆ ಪೂರ್ವಸಿದ್ಧತೆಗಾಗಿ ವೈದ್ಯಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳ ದಿನಾಂಕ 31/12/2025 ರಂದು ಇದ್ಯಂತಹ ಸೇವಾ ಮಾಹಿತಿಯನ್ನು ಆಯಾಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಂದ ಕಲೆಹಾಕಲು ಹಾಗೂ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಲುವಾಗಿ ನಿಯಮ (61)ರನ್ವಯ ಒಂದೇ ಸ್ಥಳದಲ್ಲ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ/ ಸಿಬ್ಬಂದಿಗಳ ಮಾಹಿತಿಯನ್ನು ಕೃಡೀಕರಿಸಲು ಸೂಚಿಸಿರುವರು.

    ಅದರಂತೆ, ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ/ ಸಿಬ್ಬಂದಿಗಳ ಮೂಲ ಸೇವಾಪುಸ್ತಕವನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಸಿ ಸೇವಾ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಿ ಸಾಫ್ಟ್ & ಹಾರ್ಡ್ ಪ್ರತಿಯನ್ನು Covering Letter ನೊಂದಿಗೆ ದಿನಾಂಕ 15-12-2025 ರಂದು ಸಂಜೆ 5 ಗಂಟೆಯೊಳಗಾಗಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿಗೆ ಸಲ್ಲಿಸಲು ಸೂಚಿಸಿದೆ.

    ಸ್ವೀಕೃತಗೊಂಡಿರುವ ಮಾಹಿತಿ ಹಾಗೂ ವರ್ಗಾವಣೆಯನ್ನು ಅರ್ಜಿಗಳನ್ನು ತಾಲೂಕಾ ಆರೋಗ್ಯ ಅಧಿಕಾರಿಗಳು ವೃಂದವಾರು ಕ್ರೂಡೀಕರಿಸಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ದಿನಾಂಕ 20-12-2025 ರಂದು ಸಂಜೆ 5 ಗಂಟೆಯೊಳಗಾಗಿ ಮುದ್ದಾಂ ಈ ಕಛೇರಿಗೆ ಸಾಫ್ಟ್ & ಹಾರ್ಡ್ ಪ್ರತಿಯೊಂದಿಗೆ ತಪ್ಪದೇ ಸಲ್ಲಿಸಲು ಸೂಚಿಸಿದೆ.

    ಕನಿಷ್ಠಾವಧಿ ಪೂರೈಸಬೇಕಾದ ವರ್ಷಗಳು: ಗ್ರೂಪ್-ಎ 3 ವರ್ಷಗಳು, ಗ್ರೂಪ್-ಬಿ 4, ಗ್ರೂಪ್-ಸಿ 5 ಮತ್ತು ಗ್ರೂಪ್‌-ಡಿ 7 ವರ್ಷಗಳು. ಪ್ರಯುಕ್ತ ಗ್ರೂಪ್ ಎ,ಬಿ,ಸಿ ಮತ್ತು ಡಿ ವೃಂದದ ಅಧಿಕಾರಿ/ ಸಿಬ್ಬಂದಿಗಳ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕಾ ಆರೋಗ್ಯ ಅಧಿಕಾರಿಗಳು ಕ್ರೂಡಿಕರಿಸಿ ಪರಿಶೀಲಿಸಿ ದಿನಾಂಕ20-12-2025 ರೊಳಗಾಗಿ ಈ ಕಛೇರಿಯ ಸಿಬ್ಬಂದಿ-2 ಸಂಕಲನದಲ್ಲಿ ನೇರವಾಗಿ ಸಲ್ಲಿಸಲು ಸೂಚಿಸಲಾಗಿದೆ.

    ಸೇವಾಮಾಹಿತಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಮುಂದೆ ಯಾವುದಾದರು ಲೋಪಗಳು ಕಂಡು ಬಂದಲ್ಲಿ ಅಂತಹ ಅಧಿಕಾರಿ/ ಆಡಳಿತ ವೈದ್ಯಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಮೇಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.

    ವಿಶೇಷ ಸೂಚನೆಗಳು

    • ಸದರಿ ನೌಕರರ ಮಾಹಿತಿಯನ್ನು ಸೇವಾ ಪುಸ್ತಕವನ್ನು ಪರಿಶೀಲಿಸಿ, ಯಾವ ಅವಧಿಯಿಂದ ಯಾವ ಅವಧಿಯವರೆಗೆ ಕರ್ತವ್ಯ ನಿರ್ವಹಿಸಿದ್ದಾರೆಂದು ಪರಿಶೀಲಸಿ ಎ, ಬಿ, ಸಿ ವಲಯದ ಅಂಕಗಳನ್ನು ನೀಡುವುದು.
    • ಸದರಿ ನೌಕರರ ಗಂಭೀರ ಮಾರಣಾಂತಿಕ ಖಾಯಿಲೆಯ ಬಗ್ಗೆ ವೈದ್ಯಕೀಯ ಮಂಡಳಿಯಿಂದ ಪಡೆದಿರುವ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು.
    • ವರ್ಷಗಳ ವಯೋನಿವೃತ್ತಿ ಹೊಂದುವಂತಹ ಪ್ರಕರಣಗಳಲ್ಲಿ ಸದರಿ ನೌಕರರ ಜನ್ಮ ದಿನಾಂಕ ಮತ್ತು ಸೇವೆಗೆ ಸೇರಿದ ದಿನಾಂಕವನ್ನು ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯಿಂದ ದೃಢೀಕರಿಸಿ ಸಲ್ಲಿಸುವುದು.
    • ಶೇಕಡಾ 40 ವಿಕಲಚೇತನದ ಬಗ್ಗೆ ವೈದ್ಯಕೀಯ ಮಂಡಳಿಯ ವರದಿ/ ಅಂಗವಿಕಲ ಪ್ರಮಾಣ ಪತ್ರ ಸಲ್ಲಿಸುವುದು.
    •  ವಿಧವೆ ಪ್ರಕರಣದಲ್ಲಿ (12) ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇರಬೇಕು ಮತ್ತು ತಹಶೀಲ್ದಾರ್‌ರವರಿಂದ ಪಡೆದ ವಿಧವಾ ಪ್ರಮಾಣ ಪತ್ರವು ಒಂದು ವರ್ಷದ ಅವಧಿಯ ಒಳಗೆ ಇರತಕ್ಕದು. ವಿಧುರ ಪ್ರಕರಣದಲ್ಲಿ ಸಂಗಾತಿಯ ಮರಣ ಪ್ರಮಾಣ ಪತ್ರ ಹಾಗೂ ಮರು ವಿವಾಹವಾಗಿಲ್ಲದಿರುವ ಬಗ್ಗೆ ದೃಢೀಕರಣ.
    • ಪತಿ-ಪತ್ನಿ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಅರ್ಹರಿರುತ್ತಾರೆ. ಒಂದೇ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಈ ಪ್ರಕರಣದಡಿ ವರ್ಗಾವಣೆಗೆ ಅರ್ಹರಿರುವುದಿಲ್ಲ ಮತ್ತು ಇಲಾಖೆಯ ದಂಪತಿಗಳಿಬ್ಬರೂ ವರ್ಗಾವಣೆಗೆ ಅರ್ಜಿ ಸಲ್ಲಸಲು ಅವಕಾಶವಿರುವುದಿಲ್ಲ. ಅವರಲ್ಲಿ ಯಾರಾದರೂ ಒಬ್ಬರು ಮಾತ್ರ ಅರ್ಜಿ ಸಲ್ಲಸತಕ್ಕದ್ದಲ್ಲ, ಇಲ್ಲವಾದಲ್ಲಿ ಇಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading