Saturday, August 8, 2026
spot_img
More
    spot_img
    HomeTop Storyಹಸುಗಳ ಕೆಚ್ಚಲು ಕೊಯ್ದಿರುವ ಸ್ಥಳಕ್ಕೆ ವಿಪಕ್ಷ ನಾಯಕ ಆರ್.ಅಶೋಕ್‌ ಭೇಟಿ: ಸರ್ಕಾರದ ವಿರುದ್ಧ ವಾಗ್ದಾಳಿ

    ಹಸುಗಳ ಕೆಚ್ಚಲು ಕೊಯ್ದಿರುವ ಸ್ಥಳಕ್ಕೆ ವಿಪಕ್ಷ ನಾಯಕ ಆರ್.ಅಶೋಕ್‌ ಭೇಟಿ: ಸರ್ಕಾರದ ವಿರುದ್ಧ ವಾಗ್ದಾಳಿ

    ಬೆಂಗಳೂರು: ಸಂಕ್ರಾಂತಿ ಹಬ್ಬ ಬಂತೆಂದರೆ ಗೋ ಪೂಜೆ ಮಾಡುವುದು ಬಹಳ ಪವಿತ್ರವಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಬಂದ ಮೇಲೆ ಸಂಕ್ರಾಂತಿ ಹಬ್ಬಕ್ಕೆ ಹಸುಗಳ ಕೆಚ್ಚಲು ಕೊಯ್ದಿರೋ ಘಟನೆಯನ್ನು ಗಿಫ್ಟ್‌ ಆಗಿ ನೀಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

    Advertisement

    ನಗರದ ಚಾಮರಾಜಪೇಟೆಯಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ಹಸುಗಳ ಕೆಚ್ಚಲನ್ನು ಕೊಯ್ದಿದಿದ್ದು ಇಂದು ಆರ್‌.ಅಶೋಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಜ್ಯದಲ್ಲಿ ಹಸುವಿನ ಕೆಚ್ಚಲನ್ನು ಕತ್ತರಿಸುವಂತಹ ಜಿಹಾದಿ ಮನಸ್ಸುಗಳನ್ನು ಇಂದು ನಾವೆಲ್ಲಾ ನೋಡುತ್ತಿದ್ದೇವೆ. ಯಾರೂ ಕೂಡ ಇಂತಹ ಘಟನೆಯನ್ನು ಊಹಿಸಿರಲಿಲ್ಲ. ನಾನು ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಘಟನೆಯನ್ನು ವೀಕ್ಷಿಸುತ್ತಿದ್ದೇನೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್‌ ಸರ್ಕಾರ. ಈ ವರ್ಷದ ನ್ಯೂ ಇಯರ್‌ ಗಿಫ್ಟ್‌ ಆಗಿ ಬೆಲೆ ಏರಿಕೆ ಮಾಡಿದರು. ಇದೀಗ ಸಂಕ್ರಾಂತಿ ಹಬ್ಬದ ಅಂಗವಾಗಿ ಹಸುಗಳ ಕೆಚ್ಚಲನ್ನು ಕೊಯ್ದಿರುವ ಘಟನೆಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ಕಿಡಿಕಾರಿದರು.

    ಕೆಚ್ಚಲು ಕೊಯ್ದಿರೋ ಹಸುಗಳ ಮಾಲೀಕ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದು, ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹಸುಗಳ ಮಾಲೀಕರು ಹೋರಾಟ ಮಾಡಿದ್ದರು. ಪಶು ಆಸ್ಪತ್ರೆಯ ಉಳಿವಿಗಾಗಿ ಈ ಹಸು ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು ಎಂಬ ಕಾರಣಕ್ಕೆ ಅದನ್ನು ಸಹಿಸದಿರುವ ಜಿಹಾದಿ ಮನಸ್ಸುವುಳ್ಳವರು ಇಂತಹ ಕೆಲಸ ಮಾಡಿ, ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸರ್ಕಾರ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ನೀಡುತ್ತಿದೆ. ಹಿಂದೂಗಳು ಈ ರಾಜ್ಯದಲ್ಲಿ ಜೀವನ ಮಾಡುವುದು ಹೇಗೆ? ರಾಜ್ಯ ಸರ್ಕಾರದ ನಾಯಕರು ಮಾತು ಎತ್ತಿದರೆ ದೇವಸ್ಥಾನಗಳಿಗೆ ಹೋಗಿ ಪೂಜೆ ಮತ್ತು ಹೋಮ ಮಾಡುತ್ತಾರೆ. ಅದೆಲ್ಲಾ ನಾಟಕ ಎಂಬಂತೆ ಬಿಂಬಿತವಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಕಾಂಗ್ರೆಸ್‌ನ ನಾಯಕರು ಭಾಷಣಗಳ ವೇಳೆ ನಾವೆಲ್ಲಾ ಒಂದೇ ಎಂದು ಹೇಳುತ್ತಾರೆ. ಆದರೆ ಆ ಹೇಳಿಕೆ ಕೇವಲ ಮತಕ್ಕಾಗಿ ಮಾತ್ರ, ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದಂದು ಗೋವುಗಳನ್ನು ಪೂಜಿಸುವುದು ಬಹಳ ವಿಶೇಷವಾಗಿದೆ. ಈ ಮಧ್ಯೆಯೇ ದುಷ್ಕರ್ಮಿಗಳಿಂದ ಹಸುಗಳ ಕೆಚ್ಚಲನ್ನು ಕೊಯ್ದಿರೋ ಘಟನೆ ನಡೆದಿದೆ. ಹೀಗಾಗಿ ಸರ್ಕಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ ಹಲ್ಲೆಗೊಳಗಾಗಿರುವ ಹಸುಗಳಿಗೆ ಚಿಕಿತ್ಸೆ ನೀಡಿ, ಅವುಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading