ಹರಿಯಾಣದ ಸೋನಿಯಾಪೇಟೆಯ ಒಪಿ ಜಿಂದಾಲ್ ಯೂನಿರವರ್ಸಿಟಿ ಹಾಸ್ಟೆಲ್‌ಗೆ ವಿದ್ಯಾರ್ಥಿಯೋರ್ವ ಯುವತಿಯನ್ನು ಸೂಟ್‌ಕೇಸ್ ಮೂಲಕ ಕರೆ ತರಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೆಕ್ಯೂರಿಟಿಗಳು ಸೂಟ್‌ಕೇಸ್ ತೆರೆದು ಯುವತಿಯನ್ನು ಹೊರ ಕರೆಯುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನು ಸೂಟ್‌ಕೇಸ್ ಗೋಡೆಯ ಬದಿಗೆ ತಗುಲಿದಾಗ ಒಳಗಿದ್ದ ಹುಡುಗಿ ಶಬ್ದ ಮಾಡಿದ ಕಾರಣ ಸೆಕ್ಯೂರಿಟಿಗಳಿಗೆ ಅನುಮಾನ ಬಂದು ಸೂಟ್‌ಕೇಸ್ ತೆಗೆಸಿ ಚೆಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಆಕೆ ಆತನ ಗರ್ಲ್‌ಫ್ರೆಂಡ್ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅತ್ತ ಯೂನಿವರ್ಸಿಟಿ ಈ ವಿವಾದದ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


