ಹೈದರಾಬಾದ್: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ನ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಅಬ್ಬರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅಬ್ಬರದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿದ್ದು, ಸನ್‌ರೈಸರ್ಸ್ ಹೈದರಾಬಾದ್‌ಗೆ 246 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಪಂಜಾಬ್ ಕಿಂಗ್ಸ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಬೃಹತ್ ರನ್ ಗುರಿ ನೀಡಲೇಬೇಕು ಎಂಬ ಮನಸ್ಥಿತಿಯಲ್ಲಿ ಬ್ಯಾಟಿಂಗ್ ನಡೆಸಿತು. ಕೇವಲ 4 ಓವರ್‌ಗಳಲ್ಲಿ ಆರಂಭಿಕರು 66 ರನ್ ಜತೆಯಾಟವನ್ನಾಡಿದರು. ಬಳಿಕ ಕಣಕ್ಕಿಳಿದ ಶ್ರೇಯಸ್ ಐಯ್ಯರ್ ಎಸ್‌ಆರ್‌ಎಚ್ ಬೌಲರ್‌ಗಳ ಬೆವರಿಳಿಸಿದರು. ಹೀಗೆ ಪಂದ್ಯದ ಆರಂಭದಲ್ಲಿ ರನ ಮಳೆ ಹರಿಸಿದ್ದ ಪಂಜಾಬ್ ಕಿಂಗ್ಸ್‌ಗೆ ಡೆತ್ ಓವರ್‌ನಲ್ಲಿ ನಿರೀಕ್ಷಿತ ರನ್ ಬರಲಿಲಲ್ಲ.
ಆಗ ತಾನೇ ಕಣಕ್ಕಿಳಿದಿದ್ದ ಸ್ಟಾಯ್ನಿಸ್ ಮೊಹಮ್ಮದ್ ಶಮಿ ಎಸೆದ ಕೊನೆಯ ಓವರ್‌ನ ಕೊನೆಯ ನಾಲ್ಕು ಎಸೆತಗಳಿಗೆ ಭರ್ಜರಿ ಸಿಕ್ಸ ಸಿಡಿಸಿ ಡೆತ್ ಓವರ್‌ಗಳಲ್ಲಿದ್ದ ರನ್ ಕೊರತೆಯನ್ನು ನೀಗಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


