ಬೆಂಗಳೂರಿನಲ್ಲಿ ಸದಾ ಕೇಳಿ ಬರುವ ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆ ಸಹ ಒಂದು. ಅದರಲ್ಲಿಯೂ ಹಿಂದಿ ಭಾಷಿಕರ ಜೊತೆ ಕನ್ನಡಿಗರಿಗೆ ಹಿಂದಿನಿಂದಲೂ ಸಮಸ್ಯೆ ಇದೆ. ಕಾರಣ ಹಿಂದಿ ಜನರು ಕನ್ನಡ ಕಲಿಯುವುದಿಲ್ಲ ಎಂಬುದು.
ಇದೇ ಕಾರಣಕ್ಕೆ ಬೆಂಗಳೂರಿನಾದ್ಯಂತ ಅಪ್ಪಟ ಕನ್ನಡ ಅಭಿಮಾನಿಗಳು ಸದಾ ಹಿಂದಿಯನ್ನು ವಿರೋಧಿಸುತ್ತಲೇ ಇರುತ್ತಾರೆ. ಇನ್ನು ಹಿಂದಿ ಸಂವಹನ ಮಾಡಲು ಇರುವ ಒಂದು ಭಾಷೆ ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಹಲವರು ವಾದಿಸಿದರೂ ಸಂವಹನ ಮಾಡಲು ಕರ್ನಾಟಕದಲ್ಲಿ ಮೂಲ ಭಾಷೆ ಕನ್ನಡ ಹಾಗೂ ಸಂವಹನ ಭಾಷೆ ಇಂಗ್ಲಿಷ್ ಸಾಕು ಬೇರೆ ಎಲ್ಲ ಏಕೆ ಬೇಕು ಎನ್ನುತ್ತಾರೆ ನಗರದ ಜನತೆ.
ಇನ್ನು ಸಾಮಾಜಿಕ ಜಾಲತಾಣದಲ್ಲಂತೂ ಹಿಂದಿ ಭಾಷೆ ವಿರೋಧಿಸುವ ಕನ್ನಡಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಇಂದಿಗೂ ಆರ್‌ಸಿಬಿಯಂತಹ ಬೃಹತ್ ಫ್ರಾಂಚೈಸಿ ಹಿಂದಿನ ಹಾಗೆ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಬದಲು ಕನ್ನಡದಲ್ಲೇ ಹೆಚ್ಚಾಗಿ ಪೋಸ್ಟ್ ಹಂಚಿಕೊಳ್ಳುತ್ತಿರಲು ಇದೇ ಕನ್ನಡಿಗರು ಕಾರಣ.
ಸದ್ಯ ಅಂತಹದ್ದೇ ಅಪ್ಪಟ ಕನ್ನಡಾಭಿಮಾನಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಒಂದನೇ ಟರ್ಮಿನಲ್ ವಿಮಾನನಿಲ್ದಾಣದ ವಿಮಾನ ವೇಳಾಪಟ್ಟಿಯ ವಿಡಿಯೊವನ್ನು ಹಂಚಿಕೊಂಡಿದ್ದು ಎಲ್ಲ ಮಾಹಿತಿಯೂ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಇದೆ ಎಂದು ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೇ ದ್ವಿಭಾಷಾ ನೀತಿ ಎಂಬ ಹ್ಯಾಷ್‌ಟ್ಯಾಗ್ ಬಳಸುವ ಮೂಲಕ ಹಿಂದಿ ಹೇರಿಕೆ ವಿರೋಧಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


