ಮೈಸೂರು ನಗರದಲ್ಲಿ `ಡ್ರಗ್ಸ್ ಫ್ಯಾಕ್ಟರಿ ಪತ್ತೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ NDPS ಕಾಯ್ದೆಯಡಿ 6 ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 71 ಜನ ಅನುಮಾನಿತರಿಗೆ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ.
ಸೋಮವಾರ ತಡರಾತ್ರಿ ದಾಳಿ ಮಾಡಿ ಕೇಸ್ ದಾಖಲಿಸಿದ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಎನ್ ಡಿ ಪಿ ಎಸ್ ಕಾಯ್ದೆಯಡಿ 6 ಮಂದಿ ಮೇಲೆ ದೂರು ದಾಖಲಿಸಿದ್ದಾರೆ.
ಸಿಂತೆಟಿಕ್ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ ಪತ್ತೆಯಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿತ್ತು. ಮೈಸೂರಿನ ಸುನ್ನಿ ಚೌಕ್, ಮಟನ್ ಸ್ಟಾಲ್ ರೋಡ್, ಕೆಸರೆ, ಹುಡ್ಕೋ ಬಡಾವಣೆ ಸೇರಿ ಅನೇಕ ಕಡೆ ತಪಾಸಣೆ ನಡೆಸಲಾಗಿದ್ದು, ನಗರದ ಕೆಲವೆಡೆ ಡ್ರಗ್ಸ್ ವಿರುದ್ಧ ಪೊಲೀಸರು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
,ಆ.13ರಿಂದ ಕರ್ನಾಟಕದಲ್ಲಿ ವ್ಯಾಪಕ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


