ನಂಬರ್ ಅಂದರೆ ನಾನು, ನಾನು ಅಂದರೆ ನಂಬರ್ ಎಂದು ಹೇಳುತ್ತಲೇ ಕರುನಾಡಿನೆಲ್ಲೆಡೆ ಜನಪ್ರಿಯವಾದ ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್ ತಮ್ಮ ನಂಬರ್ ಬಲದಿಂದ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದರು. , ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಕುಣಿದರು. ಆರ್ಯವರ್ಧನ್ ಸದ್ಯ ದರ್ಶನ್ ವಿಚಾರದಲ್ಲಿ ಭವಿಷ್ಯವನ್ನು ಹೇಳಿದ್ದಾರೆ.
ದರ್ಶನ್ ಜಾಮೀನು ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಬೇಲ್ ರದ್ದಾಗುತ್ತಾ ? ಅಥವಾ ಬೇಲ್ ಸಿಗುತ್ತಾ ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಸದ್ಯ ಮಾತನಾಡಿದ್ದಾರೆ. ಈ ಕುರಿತು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.
ದರ್ಶನ ಅವರ ಜನ್ಮದಿನಾಂಕ 7 [ 1+6 ] ಆಗಿರುವುದಕ್ಕೆ ಅವರಿಗೆ ಸಮಸ್ಯೆಗಳಾಗುತ್ತಿವೆ. ಈಗ ಅವರು ಬುದ್ದಿವಂತರಾಗಿದ್ದಾರೆ ಎಂದು ಹೇಳಿದ್ದಾರೆ. ಅವರದು.. ನಂದು ಮತ್ತು ದಿನಕರ್, ನಮ್ಮ ಮೂವರದ್ದು ಕೂಡ ವೃಷಭ ಲಗ್ನ, ವಿನೀಶ್ ವೃಶ್ಚಿಕ ರಾಶಿ.. ವಿಜಯಲಕ್ಷ್ಮಿ ಅವರದ್ದು ಭರಣಿ ನಕ್ಷತ್ರ ಮೇಷ ರಾಶಿ ಎಂದು ಹೇಳಿರುವ ಆಯವರ್ಧನ್ ಗುರೂಜಿ,ಯಾವತ್ತು ವೃಷಭ ಲಗ್ನದವರಿಗೆ ಮೂರನೇ ಮನೆಯಲ್ಲಿ ಶನಿ ಇರಬಾರದು ಎಂದು ಹೇಳಿದ್ದಾರೆ.
ಮೂರನೇ ಮನೆಯಲ್ಲಿ ಕಾಮ..ಜಗಳ..ಧೈರ್ಯ ಹೇಳುತ್ತೆ ಇವರಿಗೆ ಶತ್ರುಗಳು ಜಾಸ್ತಿ ಎಂದು ಹೇಳಿದ್ದಾರೆ. ಜ್ಯೋತಿಷ್ಯದಲ್ಲಿ ಮೂರನೇ ಮನೆ ಆರನೇ ಮನೆಯಲ್ಲಿ ಪಾಪ ಗ್ರಹಗಳಿರಬಾರದು ಅಲ್ಲೆಲ್ಲ ಶುಭ ಗ್ರಹಗಳಿರಬೇಕು ಎಂದು ಹೇಳಿರುವ ಆರ್ಯವರ್ಧನ್ ಗುರೂಜಿ ಆರನೇ ಮನೆ ಖಾಲಿ ಇದ್ದರೂ ಪರವಾಗಿಲ್ಲ ಆದರೆ ಮೂರನೇ ಮನೆಯಲ್ಲಿ ಪಾಪ ಗ್ರಹಗಳಿದ್ದರೆ ಕೋಪ.. ಜಗಳ..ಜೈಲು ಇದೆಲ್ಲ ಅನುಭವಿಸಲೇಬೇಕು ಅದು ಅವರ ಕರ್ಮ ಎಂದು ಹೇಳಿದ್ದಾರೆ.
ಆದರೆ ಇದೇ ಸಮಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನೂರಕ್ಕೆ ನೂರು ದರ್ಶನ್ ಅವರಿಗೆ ಜಾಮೀನು ಸಿಗುತ್ತೆ ಎಂದು ಹೇಳಿದ್ದಾರೆ. ಮುಂದೆ ದರ್ಶನ್ ಸುಮ್ಮನೆ ಇದ್ದರು ಕೂಡ ಸಮಸ್ಯೆಗಳು ಅವರನ್ನೇ ಹುಡುಕಿಕೊಂಡು ಬರುತ್ತಾವೆ ಎಂದು ಕೂಡ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


