ಕಲಬುರಗಿ: ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿದೆ.
ಆ.7ರ ಸಂಜೆ ಎಪಿಎಂಸಿ ರಸ್ತೆಯಲ್ಲಿ ಅಪ್ರಾಪ್ತ ಬೈಕ್ನಲ್ಲಿ ಬರುತ್ತಿರುವಾಗ ಪಿಎಸ್ಐ ಸೋಮನಿಂಗ ಒಡೆಯರ್ ತಡೆದು ತಪಾಸಣೆ ನಡೆಸಿದ್ದರು. 181, 199(ಎ) ಮೋಟಾರು ವಾಹನ ಕಾಯ್ದೆ ಅಡಿ ಸಂಚಾರ ನಿಯಮ ಉಲ್ಲಂಘಿಸಿದ್ದರಿಂದ ಎಂ.ಜಿ.ನಗರದ ನಿವಾಸಿ ಗುರಲಿಂಗಪ್ಪ ಜಂಬಗಿ (45) ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಅನೀಲ ಅಮಾತೆ, ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕೆ ತಂದೆಗೆ 26,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಮೆಟ್ರೊ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


