Saturday, November 7, 2026
spot_img
More
    spot_img
    HomeStateDistrictಇಂದು ವಿಶ್ವ ಆನೆ ದಿನಾಚರಣೆ: ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ನಂಬರ್ 1 ಜಿಲ್ಲೆ ಯಾವುದು?

    ಇಂದು ವಿಶ್ವ ಆನೆ ದಿನಾಚರಣೆ: ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ನಂಬರ್ 1 ಜಿಲ್ಲೆ ಯಾವುದು?

    ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹುಲಿಗಳಲ್ಲಿ ಅಷ್ಟೇ ಅಲ್ಲ, ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್.‌1 ಸ್ಥಾನ ಪಡೆದಿದೆ.

    ರಾಜ್ಯದಲ್ಲಿ ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ. ಚಾಮರಾಜನಗರ ಜಿಲ್ಲೆ ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್‌ ಒನ್‌ ಎಂಬ ಪಟ್ಟ ಪಡೆದುಕೊಂಡಿದೆ.

    ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ ಬಂಡೀಪುರದಲ್ಲಿ 1500ಕ್ಕೂ ಹೆಚ್ಚು, ಮಹದೇಶ್ವರ, ಕಾವೇರಿ, ಬಿಆರ್‌ಟಿ ಮೂರು ಸೇರಿ ಅಂದಾಜು 1800ಕ್ಕೂ ಹೆಚ್ಚು ಆನೆಗಳಿವೆ.

    ಕಾಡಾನೆ-ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಕಾರ್ಯಕ್ರಮಗಳ ಪರಿಣಾಮ ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ರೈಲ್ವೆ ಬ್ಯಾರಿಕೇಡ್‌, ಸೋಲಾರ್‌ ತಂತಿ ಅಳವಡಿಕೆ, ಆನೆ ಕಂದಕ ಸೇರಿದಂತೆ ಹಲವು ಯೋಜನೆಗಳ ಪರಿಣಾಮ ಕಾಡಾನೆಗಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗಿದೆ.

    ಇನ್ನು 2023ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದವು. ಈ ಪೈಕಿ ಚಾಮರಾಜನಗರ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಆನೆಗಳಿದ್ದವು. ಬಂಡೀಪುರದಲ್ಲಿ 1116, ಬಿಆರ್‌ಟಿ 619, ಮಹದೇಶ್ವರ ವನ್ಯಧಾಮದಲ್ಲಿ 706, ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿದ್ದವು. ಇದೀಗ ಆನೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

    ಮೆಟ್ರೊ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search