ನವದೆಹಲಿ: ಆದಾಯ ನಷ್ಟ ತಡೆಯಲು ಚಿಂತನೆ ನಡೆಸಿರುವ ದೆಹಲಿ ರಾಜ್ಯ ಸರ್ಕಾರ, ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.
ಇದರ ಪ್ರಕಾರ ಇನ್ನು ಮುಂದೆ ಬಿಯರ್ ಸೇವನೆ ಮಾಡುವವರ ವಯಸ್ಸನ್ನು 25ರಿಂದ 21 ವರ್ಷಕ್ಕೆ ಇಳಿಸಲು ಚಿಂತನೆ ನಡೆಸಲಾಗಿದೆ. ಈವರೆಗೂ ದೆಹಲಿಯಲ್ಲಿ ಬಿಯರ್ ಕುಡಿಯುವವರ ವಯಸ್ಸನ್ನು 25 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿತ್ತು.
ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಬಿಯರ್ ಸೇವಿಸುವವರ ವಯಸ್ಸನ್ನು 25ರಿಂದ 21 ವರ್ಷಕ್ಕೆ ಇಳಿಸಲು ಮುಖ್ಯಮಂತ್ರಿ ರೇಖಾ ಗುಪ್ತ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ವಯಸ್ಸನ್ನು ಇಳಿಕೆ ಮಾಡಿದರೆ ಆರೋಗ್ಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವರದಿ ಪಡೆಯಲಾಗಿದೆ.
ದೆಹಲಿಗೆ ಹೊಂದಿಕೊಂಡಿರು ನೋಯ್ಡಾ, ಗುರುಗಾಂವ್, ಗಾಜಿಯಾಬಾದ್ ಮತ್ತು ಫರಿದಾಬಾದ್‍ನಲ್ಲಿ ಬಿಯರ್ ಕುಡಿಯುವವರ ವಯಸ್ಸನ್ನು 25ರಿಂದ 21ನೇ ವರ್ಷಕ್ಕೆ ಇಳಿಕೆ ಮಾಡಲಾಗಿದೆ.
ಇದೇ ಮಾದರಿಯನ್ನು ದೆಹಲಿಗೆ ಅಳವಡಿಸಿಕೊಂಡರೆ ಸರ್ಕಾರದ ಬೊಕ್ಕಸಕ್ಕೆ ಲಾಭ ಹಾಗೂ ಕಾಳಸಂತೆಯಲ್ಲಿ ಮಾರಾಟವನ್ನು ತಪ್ಪಿಸಬಹುದೆಂಬುದು ಸರ್ಕಾರದ ಧೋರಣೆಯಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್‍ಗಳು ದೆಹಲಿಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಸಮಿತಿ ಪರಿಶೀಲಿಸುತ್ತಿದೆ.
ಪ್ರಸ್ತುತ ಅವುಗಳ ಕೊರತೆಯಿಂದಾಗಿ ಗ್ರಾಹಕರು ಹರಿಯಾಣ ಮತ್ತು ಉತ್ತರಪ್ರದೇಶದತ್ತ ಮುಖ ಮಾಡುತ್ತಾರೆ, ಇದರಿಂದಾಗಿ ದೆಹಲಿಗೆ ಆದಾಯ ನಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಜನನಿಬಿಡ ವಸತಿಪ್ರದೇಶಗಳಲ್ಲಿ ಮದ್ಯದಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.
ಸಿಕ್ಕಿಂ: ಭಾರೀ ಮಳೆಗೆ ಭೂಕುಸಿತ; ಒಂದೇ ಕುಟುಂಬದ ಮೂವರ ಸಾವು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


