ಥಾಣೆ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರು ಮಹಿಳೆಯರು ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಇಲ್ಲಿ ಬಂಧಿಸಲಾಗಿದೆ.
ಕಲ್ಯಾಣ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಝೆಂಡೆ ತಿಳಿಸಿದ್ದಾರೆ.
ಗಸ್ತು ತಿರುಗುತ್ತಿದ್ದ ತಂಡವು ಕಲ್ಯಾಣ್ ರೈಲು ನಿಲ್ದಾಣದ ಬಳಿ ಆರು ಮಹಿಳೆಯರು ಅಡ್ಡಾಡುತ್ತಿರುವುದನ್ನು ಗಮನಿಸಿದೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ ಬಾಂಗ್ಲಾದೇಶದ ಜನನ ಪ್ರಮಾಣಪತ್ರಗಳು ಮತ್ತು ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಡಿಸಿಪಿ ವರದಿಗಾರರಿಗೆ ತಿಳಿಸಿದರು.
ಇನ್ನು ಹಲವರು ಇರಬಹುದೆಂದು ತನಿಖೆ ಕೈಗೊಂಡಾಗ ಬಾಂಗ್ಲಾದೇಶಿ ಪ್ರಜೆ ಎಂದು ಅದೇ ಪ್ರದೇಶದಲ್ಲಿ ಬಂಗ್ಲಾದೇಶಿ ಪ್ರಜೆಯನ್ನು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದರು.
ವಿಚಾರಣೆಯ ಸಮಯದಲ್ಲಿ, ಅವರು ಅಕ್ರಮವಾಗಿ ಗಡಿ ದಾಟುವ ಮೂಲಕ ಭಾರತಕ್ಕೆ ಪ್ರವೇಶಿಸಿ ನಂತರ ಮುಂಬೈಗೆ ರೈಲು ಹತ್ತಿದ್ದಾಗಿ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದರು.
ಭಾರತೀಯ ಪಾಸ್‍ಪೋರ್ಟ್ ಕಾಯ್ದೆ ಮತ್ತು ಇತರ ಕಾನೂನುಗಳ ಅಡಿಯಲ್ಲಿ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಗುಂಪು ಯಾವುದೇ ಮಾನವ ಕಳ್ಳಸಾಗಣೆ ಜಾಲದೊಂದಿಗೆ ಸಂಬಂಧ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ
ನೇಪಾಳದಲ್ಲಿ ಹೊಟೇಲ್‌ಗೆ ಬೆಂಕಿ; ಭಾರತ ಮೂಲದ ಮಹಿಳೆ ದುರ್ಮರಣ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


