Tuesday, September 1, 2026
spot_img
More
    spot_img
    HomeInternationalನೇಪಾಳದಲ್ಲಿ ಹೊಟೇಲ್‌ಗೆ ಬೆಂಕಿ; ಭಾರತ ಮೂಲದ ಮಹಿಳೆ ದುರ್ಮರಣ

    ನೇಪಾಳದಲ್ಲಿ ಹೊಟೇಲ್‌ಗೆ ಬೆಂಕಿ; ಭಾರತ ಮೂಲದ ಮಹಿಳೆ ದುರ್ಮರಣ

    ಕಠ್ಮಂಡು: ನೇಪಾಳದಲ್ಲಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಹೋಟೆಲ್‍ನಲ್ಲಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಉತ್ತರಪ್ರದೇಶದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

    Advertisement

    ಮೃತ ಮಹಿಳೆಯನ್ನು ರಾಜೇಶ ಗೋಲಾ (57) ಎಂದು ಗುರುತಿಸಲಾಗಿದೆ.

    ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ಕೆಲಸಕ್ಕೆ ರಜೆ ಹಾಕಿ ತೆರಳಿದ್ದ ಗಾಜಿಯಾಬಾದ್‍ನ ದಂಪತಿ ಕಠಂಡುವಿನಲ್ಲಿ ಸಿಲುಕಿಕೊಂಡಿದ್ದರು. ರಾಮ್‍ವೀರ್ ಸಿಂಗ್ ಗೋಲಾ ಮತ್ತು ಅವರ ಪತ್ನಿ ರಾಜೇಶ್ ಗೋಲಾ ಸೆಪ್ಟೆಂಬರ್ 7ರಂದು ಕಠಂಡು ತಲುಪಿದ್ದರು.

    ಈ ಸಮಯದಲ್ಲಿ ನೇಪಾಳದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಿಂಸಾಚಾರ ನಡೆಯುತ್ತಿತ್ತು. ಪ್ರತಿಭಟನಾಕಾರರು ಮನಸ್ಸಿಗೆ ಬಂದಂತೆ ಸಿಕ್ಕಸಿಕ್ಕ ಕಟ್ಟಡಗಳಿಗೆ ಹಾನಿ ಮಾಡಿದ್ದರು. ಅದೇ ರೀತಿ ರಾಮ್‍ವೀರ್ ಸಿಂಗ್ ಕುಟುಂಬ ತಂಗಿದ್ದ ಹೋಟೆಲ್‍ಗೂ ಸೆ.9ರಂದು ಬೆಂಕಿ ಹಚ್ಚಲಾಗಿತ್ತು.

    ಹಿಂಸಾಚಾರ ಭುಗಿಲೆದ್ದ ತಕ್ಷಣ, ಹೋಟೆಲ್ ಸಿಬ್ಬಂದಿ ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದರು. ನನ್ನ ಅಪ್ಪ, ಅಮ ಮೂರನೇ ಮಹಡಿಯಲ್ಲಿದ್ದರು. ಸಿಬ್ಬಂದಿ ಅವರನ್ನು ಕೆಳಗಿಳಿಸಲು ಹಗ್ಗಗಳನ್ನು ಬಳಸಿದ್ದರು. ಯಾವುದೇ ಗಾಯವಾಗದಂತೆ ಹಾಸಿಗೆಗಳನ್ನು ಕೆಳಗೆ ಇರಿಸಲಾಗಿತ್ತು.

    ಸ್ಥಳಾಂತರಿಸುವ ಸಮಯದಲ್ಲಿ ನನ್ನ ತಾಯಿ ಜಾರಿ ಬಿದ್ದರು. ಅದು ಅಷ್ಟು ಗಂಭೀರವಾಗಿರಲಿಲ್ಲ. ಬಿದ್ದ ತಕ್ಷಣ ಅವರು ಎದ್ದು ನಿಂತರು ಎಂದು ದಂಪತಿಯ ಪುತ್ರ ವಿಶಾಲ್ ಘಟನೆ ಬಗ್ಗೆ ವಿವರಿಸಿದ್ದಾರೆ.

    ಈ ಗೊಂದಲದ ನಡುವೆ, ಹೋಟೆಲ್ ಸಿಬ್ಬಂದಿ ತಾಯಿ ಮತ್ತು ತಂದೆಯನ್ನು ಬೇರೆ ಬೇರೆ ದಿಕ್ಕುಗಳಿಗೆ ಕರೆದೊಯ್ಯಬೇಕಾಯಿತು. ಪತಿಯಿಂದ ಹಠಾತ್ತನೆ ಬೇರ್ಪಟ್ಟ ಬಳಿಕ ಒತ್ತಡ ಮತ್ತು ಆಘಾತವು ತನ್ನ ತಾಯಿಯ ಸಾವಿಗೆ ಕಾರಣವಾಯಿತು.

    ಅವರಿಗೆ ತಕ್ಷಣದ ಚಿಕಿತ್ಸೆ ಸಿಗಲಿಲ್ಲ, ಅವರು ಒಟ್ಟಿಗೆ ಇದ್ದಿದ್ದರೆ, ಅವರು ಸಾಯುತ್ತಿರಲಿಲ್ಲ ಎಂದು ವಿಶಾಲ್ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯ ಹೊರತಾಗಿಯೂ, ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಅವರಿಗೆ ಯಾವುದೇ ಸಹಾಯ ಸಿಗಲಿಲ್ಲ ಎಂದು ವಿಶಾಲ್ ಆರೋಪಿಸಿದ್ದಾರೆ.

    ಅವರ ತಂದೆ ಈಗ ಮೃತದೇಹವನ್ನು ರಸ್ತೆ ಮೂಲಕ ಗಾಜಿಯಾಬಾದ್ಗೆ ತರುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಭಾರತ-ನೇಪಾಳ ಗಡಿಯನ್ನು ತಲುಪುವ ನಿರೀಕ್ಷೆಯಿದೆ. ನಾವು ನಮ ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.

    ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.

    ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ.

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಅಸ್ತಿಪಂಜರ ಪತ್ತೆ; ಪರಮೇಶ್ವರ್‌ ಪ್ರತಿಕ್ರಿಯೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading