Wednesday, September 2, 2026
spot_img
More
    spot_img
    HomeLatest news10 ನಕ್ಸಲರ ಬೆನ್ನಲ್ಲೇ ಮತ್ತಿಬ್ಬರು ನಕ್ಸಲರನ್ನು ಎನ್‌ಕೌಂಟರ್‌ ಮಾಡಿದ ಭದ್ರತಾಪಡೆ

    10 ನಕ್ಸಲರ ಬೆನ್ನಲ್ಲೇ ಮತ್ತಿಬ್ಬರು ನಕ್ಸಲರನ್ನು ಎನ್‌ಕೌಂಟರ್‌ ಮಾಡಿದ ಭದ್ರತಾಪಡೆ

    ರಾಯ್‍ಪುರ: ಹತ್ತು ಮಂದಿ ನಕ್ಸಲೀಯರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಭದ್ರತಾ ಪಡೆಗಳು ಇಬ್ಬರು ನಕ್ಸಲರನ್ನು ಎನ್‍ಕೌಂಟರ್‌ನಲ್ಲಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‍ಗಢದ ಬಿಜಾಪುರದಲ್ಲಿ ನಡೆದಿದೆ.

    Advertisement

    ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದು, ಕಾರ್ಯಾಚರಣೆ ವೇಳೆ ಶಸಾ?ತ್ರಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಗುಂಡಿನ ಚಕಮಕಿ ನಡೆಯುತ್ತಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಬಿಜಾಪುರ ಎಸ್‍ಪಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.

    ತೆಲಂಗಾಣದ ಗಡಿಯಲ್ಲಿರುವ ಜಿಲ್ಲೆಯ ನೈಋತ್ಯ ಪ್ರದೇಶದ ಅರಣ್ಯದಲ್ಲಿ ಬೆಳಿಗ್ಗೆ ಭದ್ರತಾ ಸಿಬ್ಬಂದಿಯ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಗುಂಡಿನ ಚಕಮಕಿ ನಿಂತ ನಂತರ, ಇಬ್ಬರು ನಕ್ಸಲರ ಮೃತದೇಹಗಳು, .303 ರೈಫಲ್ ಸೇರಿದಂತೆ ಶಸಾ?ತ್ರಸ್ತ್ರಗಳು ಮತ್ತು ಸ್ಫೋಟಕಗಳನ್ನು ಎನ್‍ಕೌಂಟರ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

    ನಿನ್ನೆ ರಾಜ್ಯದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಮೋಡೆಮ್ ಬಾಲಕೃಷ್ಣ ಸೇರಿದಂತೆ ಹತ್ತು ನಕ್ಸಲರು ಸಾವನ್ನಪ್ಪಿದ್ದರು.

    ಬಾಲಕೃಷ್ಣ ಅವರ ಸುಳಿವು ನೀಡಿದವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.

    ಈ ವರ್ಷ ಛತ್ತೀಸ್‍ಗಢದಲ್ಲಿ ಈವರೆಗೆ ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ 243 ನಕ್ಸಲರು ಹತರಾಗಿದ್ದಾರೆ. ಅವರಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತರ್ ವಿಭಾಗದಲ್ಲಿ 214 ನಕ್ಸಲರು ಹತರಾಗಿದ್ದಾರೆ. ಆದರೆ ರಾಯ್‍ಪುರ ವಿಭಾಗದ ಭಾಗವಾಗಿರುವ ಗರಿಯಾಬಂದ್‍ನಲ್ಲಿ 27 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ದುರ್ಗ್ ವಿಭಾಗದ ಮೊಹ್ಲಾ-ಮನ್‍ಪುರ-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

    ಸಪೋರ್ಟ್‌ ಮಾಡ್ತಿದ್ದ ಜನ ಕಡಿಮೆಯಾದ್ರು, ಜೊತೆಲಿದ್ದವರು ಉಲ್ಟಾ ಹೊಡೆದ್ರು; ಪೊಲೀಸ್‌ ವಿಚಾರಣೆ ಬಳಿಕ ಸಮೀರ್‌ ಮೊದಲ ವಿಡಿಯೊ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading