Tuesday, September 1, 2026
spot_img
More
    spot_img
    HomeEntertainmentಸಪೋರ್ಟ್‌ ಮಾಡ್ತಿದ್ದ ಜನ ಕಡಿಮೆಯಾದ್ರು, ಜೊತೆಲಿದ್ದವರು ಉಲ್ಟಾ ಹೊಡೆದ್ರು; ಪೊಲೀಸ್‌ ವಿಚಾರಣೆ ಬಳಿಕ ಸಮೀರ್‌ ಮೊದಲ...

    ಸಪೋರ್ಟ್‌ ಮಾಡ್ತಿದ್ದ ಜನ ಕಡಿಮೆಯಾದ್ರು, ಜೊತೆಲಿದ್ದವರು ಉಲ್ಟಾ ಹೊಡೆದ್ರು; ಪೊಲೀಸ್‌ ವಿಚಾರಣೆ ಬಳಿಕ ಸಮೀರ್‌ ಮೊದಲ ವಿಡಿಯೊ

    ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆಗಳು ಹಾಗೂ ಅಸಹಜ ಸಾವುಗಳ ಕುರಿತು ವಿಡಿಯೊ ಮಾಡಿದ್ದ ಯುಟ್ಯೂಬರ್‌ ಸಮೀರ್‌ಗೆ ಬೆಳ್ತಂಗಡಿ ಪೊಲೀಸರು ʼಸೀರಿಯಲ್‌ ಕಿಲ್ಲರ್ಸ್‌ ಆಫ್‌ ಧರ್ಮಸ್ಥಳʼ ವಿಡಿಯೊ ಕುರಿತಾಗಿ ನೋಟಿಸ್‌ ನೀಡಿ ವಿಚಾರಣೆ ನಡೆಸಿದ್ದರು.

    Advertisement

    ಸದ್ಯ ವಿಚಾರಣೆ ಮುಗಿಸಿರುವ ಸಮೀರ್ ವಿಡಿಯೊ ಚಿತ್ರೀಕರಿಸಲು ಹಾಗೂ ಎಡಿಟ್‌ ಮಾಡಲು ಬಳಸಿದ್ದ ಸಲಕರಣೆಗಳನ್ನು ಪೊಲೀಸರಿಗೆ ನೀಡಿದ್ದು, ಇಂದು ( ಸೆಪ್ಟೆಂಬರ್‌ 12 ) ನಡೆದ ಎಲ್ಲ ಬೆಳವಣಿಗೆಗಳ ಕುರಿತು ಸಮೀರ್‌ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

    ಧರ್ಮಸ್ಥಳ ಸೀರಿಯಲ್‌ ಕಿಲ್ಲರ್ಸ್‌ ಬಳಿಕ ಸಮೀರ್‌ ತನ್ನ ದೂತ ಚಾನೆಲ್‌ನಲಿ ಅಪ್‌ಲೋಡ್ ಮಾಡಿರುವ ವಿಡಿಯೊ ಇದಾಗಿದ್ದು, ವಿಡಿಯೊ ಆರಂಭದಲ್ಲಿಯೇ ಸಮೀರ್‌ ʼಸತ್ಯ ಮನೆಯಿಂದ ಒಂದು ಹೆಜ್ಜೆ ಇಡುವ ಮುನ್ನ ಸುಳ್ಳು ಇಡೀ ಊರಿನ ತುಂಬಾ ಓಡಾಡಿ ಜನರನ್ನು ನಂಬಿಸಿತ್ತಂತೆ. ಹಾಗಾಗಿದೆ ನಮ್ಮ ಪರಿಸ್ಥಿತಿʼ ಎಂದು ಹೇಳುತ್ತಾ ವಿಡಿಯೊ ಶುರು ಮಾಡಿದ ಸಮೀರ್‌ ತನ್ನ ವಿರುದ್ಧ ಬಂದ ಎಲ್ಲ ಆರೋಪಗಳನ್ನೂ ಇಲ್ಲಸಲ್ಲದ ಆರೋಪ ಎಂದು ತಳ್ಳಿಹಾಕಿದರು.

    ಅಲ್ಲದೇ ಸಪೋರ್ಟ್‌ ಮಾಡುತ್ತಿದ್ದ ಜನರು ಕಡಿಮೆಯಾದರು, ಜೊತೆಯಲ್ಲಿದ್ದವರು ಉಲ್ಟಾ ಹೊಡೆದರು ಎಂದು ಬೇಸರ ಹೊರಹಾಕಿದರು. ನನಗೆ ಇಸ್ಲಾಮಿಕ್‌ ದೇಶದಿಂದ ಹಣ ಬಂದಿದೆ, ಉಗ್ರ ಸಂಘಟನೆಗಳಿಂದ ಹಣ ಬಂದಿದೆ ಎಂಬ ಆರೋಪವಿದೆ, ಅಂದೂ ಹೇಳಿದ್ದೆ ಇಂದೂ ಹೇಳುತ್ತಿದ್ದೇನೆ, ನಾನು ಆ ರೀತಿ ಯಾವ ಹಣಕ್ಕೂ ಕೈ ಚಾಚುವುದಿಲ್ಲ ಎಂದು ತಮ್ಮ ಫಾಲೋವರ್ಸ್‌ಗೆ ತಿಳಿಸಿದರು.

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಅಸ್ತಿಪಂಜರ ಪತ್ತೆ; ಪರಮೇಶ್ವರ್‌ ಪ್ರತಿಕ್ರಿಯೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading