Tuesday, September 1, 2026
spot_img
More
    spot_img
    HomeLatest newsಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಅಸ್ತಿಪಂಜರ ಪತ್ತೆ; ಪರಮೇಶ್ವರ್‌ ಪ್ರತಿಕ್ರಿಯೆ

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಅಸ್ತಿಪಂಜರ ಪತ್ತೆ; ಪರಮೇಶ್ವರ್‌ ಪ್ರತಿಕ್ರಿಯೆ

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿ ಚಿನ್ನಯ್ಯ ನೀಡಿರುವ ದೂರಿನ ಆಧಾರದ ಮೇಲೆ ರಚಿತವಾಗಿರುವ ಎಸ್‌ಐಟಿ ಸದ್ಯ ತನ್ನ ತನಿಖೆಯನ್ನು ಮುಂದುವರಿಸಿದ್ದು, ತನಿಖೆ ಯಾವ ಹಂತದಲ್ಲಿದೆ ಹಾಗೂ ಏನೆಲ್ಲ ಸಿಕ್ಕಿದೆ ಎಂಬ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

    Advertisement

    ಆದರೆ ಚಿನ್ನಯ್ಯನನ್ನು ಈಗಾಗಲೇ ಜೈಲಿಗೆ ಕಳುಹಿಸಿರುವ ಎಸ್‌ಐಟಿ ಅಧಿಕಾರಿಗಳು ಸೌಜನ್ಯ ಮಾವ ವಿಠಲ ಗೌಡರನ್ನು ವಿಚಾರಣೆ ನಡೆಸಿದ್ದು, ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದೆ.

    ಇನ್ನು ವಿಠಲ ಗೌಡ ಡಿ ಟಾಕ್ಸ್‌ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಸ್ಥಳ ಮಹಜರು ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಬಂಗ್ಲೆಗುಡ್ಡದಲ್ಲಿ ಅಸ್ತಿಪಂಜರಗಳ ರಾಶಿಯೇ ಸಿಕ್ಕಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

    ಮೊದಲ ಸ್ಥಳದಲ್ಲಿ ಮೂರು ಅಸ್ತಿಪಂಜರಗಳು ಸಿಕ್ಕವು ಎಂದ ವಿಠಲ ಗೌಡ ಎರಡನೇ ಸ್ಥಳದಲ್ಲಿ ಹೆಣಗಳ ರಾಶಿಯೇ ಇತ್ತು, ಐದು ಅಸ್ತಿಪಂಜರಗಳು ಕಣ್ಣಿಗೆ ಬಿದ್ದವು, ಅಲ್ಲದೇ ಅಲ್ಲಿ ಮಗುವಿನ ಎಲುಬು ಸಹ ಇತ್ತು, ಪಕ್ಕದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಹ ಬಿದ್ದಿದ್ದವು ಎಂಬ ಆತಂಕಕಾರಿ ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್‌ ಮಾತನಾಡಿದ್ದು, ಅದರ ಬಗ್ಗೆ ಎಸ್‌ಐಟಿ ಅಧಿಕಾರಿಗಳೇ ತೀರ್ಮಾನ ಕೈಗೊಳ್ಳಬೇಕು, ಅವರು ಯಾರೋ ಹೇಳಿದರು ಎಂದು ನಾವು ಬೆಂಗಳೂರಿನಲ್ಲಿ ಕುಳಿತು ತೀರ್ಮಾನ ಮಾಡಲು ಆಗುವುದಿಲ್ಲ ಎಂದರು. ದೂರು ನೀಡಿದವರು ಅದಕ್ಕೆ ಬೇಕಾದ ದಾಖಲೆ ಕೊಟ್ಟರೆ ಎಸ್‌ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಒಂದುವೇಳೆ ಸರ್ಕಾರದ ಅನುಮತಿ ಬೇಕೆಂದರೆ ಮಾತ್ರ ತಿಳಿಸುತ್ತಾರೆ. ಸದ್ಯಕ್ಕೆ ಆ ರೀತಿಯ ಯಾವುದೇ ಅನುಮತಿ ಕೇಳಿಲ್ಲ ಎಂದು ಪರಮೇಶ್ವರ್‌ ತಿಳಿಸಿದರು.

    ಅಲ್ಲದೇ ಮಹೇಶ್‌ ಶೆಟ್ಟಿ ತಿಮರೋಡಿ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಅಸಹಜ ಸಾವುಗಳು ಸಂಭವಿಸಿದ್ದು, ಇವುಗಳನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ನೀಡಿರುವ ದೂರಿನ ಬಗ್ಗೆಯೂ ಮಾತನಾಡಿದ ಪರಮೇಶ್ವರ್‌ ಅದೂ ಸಹ ಎಸ್‌ಐಟಿ ಅಧಿಕಾರಿಗಳಿಗೆ ಬಿಟ್ಟ ವಿಚಾರ ಏನೇ ಇದ್ದರೂ ಅವರೇ ತೀರ್ಮಾನ ಮಾಡುತ್ತಾರೆ, ಎಸ್‌ಐಟಿ ಅಧಿಕಾರಿಗಳಿಗೆ ನೀಡಿರುವ ದೂರು ಅದು ಎಂದು ಹೇಳಿದರು.

    ಕಾರಿನಲ್ಲೇ ಹೃದಯಾಘಾತಕ್ಕೆ ತುತ್ತಾದ ಮಿಲಿಟರಿ ವೈದ್ಯಾಧಿಕಾರಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading