ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪದ ಮೇರೆಗೆ ರಚನೆಯಾಗಿರುವ ಎಸ್‌ಐಟಿ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿದ್ದು, ಚಿನ್ನಯ್ಯನನ್ನು ಬಂಧಿಸಿದ ಬಳಿಕ ಇನ್ನಷ್ಟು ಮಂದಿಯನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಯುಟ್ಯೂಬರ್ ಅಭಿಷೇಕ್, ಮನಾಫ್, ಸೌಜನ್ಯಪರ ಹೋರಾಟಗಾರರಾದ ಜಯಂತ್ ಟಿ ಹಾಗೂ ಗಿರೀಶ್ ಮಟ್ಟಣ್ಣವರ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದೆ. ಇನ್ನು ಇದೇ ವೇಳೆ ಸೌಜನ್ಯ ಮಾವ ವಿಠಲ ಗೌಡ ಸಹ ವಿಚಾರಣೆಗೆ ಹಾಜರಾಗಿದ್ದು, ಬಂಗ್ಲೆ ಗುಡ್ಡದಲ್ಲಿ ಅಸ್ತಿಪಂಜರಗಳ ರಾಶಿಯನ್ನೇ ತೋರಿಸಿದ್ದೇನೆ ಎಂದಿದ್ದಾರೆ.
ಹೀಗೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಧರ್ಮಸ್ಥಳ ಪ್ರಕರಣಕ್ಕೆ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತೊಂದು ದೊಡ್ಡ ತಿರುವನ್ನು ನೀಡಿದ್ದು, ಧರ್ಮಸ್ಥಳದ ವಸತಿಗೃಹಗಳಲ್ಲಿ ಅನುಮಾಸ್ಪದ ರೀತಿಯಲ್ಲಿ ಸಾವು ಸಂಭವಿಸಿದ್ದು, ಅವುಗಳ ತನಿಖೆಯನ್ನೂ ಸಹ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
2006ರಿಂದ 2010ರವರೆಗೆ ಧರ್ಮಸ್ಥಳದ ವಸತಿಗೃಹಗಳಾದ ಗಾಯತ್ರಿ, ವೈಶಾಲಿ ಹಾಗೂ ಶರಾವತಿಗಳಲ್ಲಿ ಸುಮಾರು ಅಸಹಜ ಸಾವು ಸಂಭವಿಸಿದ್ದು, ಅವುಗಳನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಬೇಕೆಂದು ತಿಮರೋಡಿ ಕೇಳಿಕೊಂಡಿದ್ದಾರೆ. ವಸತಿಗೃಹಗಳಲ್ಲಿ ಪತ್ತೆಯಾದ ಶವಗಳನ್ನು ಅನಾಥ ಶವಗಳೆಂದು ತಕ್ಷಣವೇ ಹೂತುಹಾಕಲಾಗಿದೆ. ವಸತಿ ಗೃಹಗಳಲ್ಲಿ ಸಿಗುವ ಶವಗಳು ಹೇಗೆ ಅನಾಥ ಶವವಾಗುತ್ತವೆ? ವಸತಿ ಗೃಹಗಳಿಗೆ ಬರುವವರು ವಿಳಾಸವನ್ನು ಕೊಟ್ಟಿಯೇ ಬಂದಿರುತ್ತಾರೆ ಅಲ್ಲವೇ ಎಂಬ ಗಂಭೀರವಾದ ಅನುಮಾನವನ್ನು ಉಲ್ಲೇಖಿಸಿ ತಿಮರೋಡಿ ದೂರು ನೀಡಿದ್ದಾರೆ.
ಚಿನ್ನ-ಬೆಳ್ಳಿ ಬೆಲೆ ಗಗನಕ್ಕೆ: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ ಗೊತ್ತಾ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


