ಮಂಡ್ಯ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ನಡೆಯುತ್ತಿದ್ದಂತೆ ಮದ್ದೂರಿನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಮಾರನೇ ದಿನ ಹಿಂದೂ ಪರ ಸಂಘಟನೆಗಳು ರಸ್ತೆಗಿಳಿದು ಸರ್ಕಾರದ ವಿರುದ್ಧ ಹಾಗೂ ಅನ್ಯಕೋಮಿನ ವಿರುದ್ಧ ಧಿಕ್ಕಾರ ಕೂಗಿದ್ದರು.
ಇದೇ ಪ್ರತಿಭಟನೆಯಲ್ಲಿ ನೆರೆದಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ ಸಂದರ್ಭದಲ್ಲಿ ಪ್ರತಿಭಟನಾನಿರತ ಜ್ಯೋತಿ ಎಂಬ ಮಹಿಳೆಗೆ ಲಾಠಿ ಬೀಸಿದ್ದರು. ಏಟು ಬೀಳುತ್ತಿದ್ದಂತೆ ಬಾಯಿ ಬಡಿದುಕೊಳ್ಳುತ್ತಾ ನೆಲಕ್ಕೆ ಕುಳಿತು ಅಳಲಾರಂಭಿಸಿದ ಜ್ಯೋತಿ ಗೋಳಾಡಿದ್ದಳು.
ಹೀಗೆ ಪೊಲೀಸರ ಏಟಿಗೆ ಒದ್ದಾಡಿದ್ದ ಜ್ಯೋತಿ ಕೆಲ ಸಮಯದ ಬಳಿಕ ಪೆಟ್ರೋಲ್ ಬಂಕ್‌ನ ಸಮವಸ್ತ್ರ ಧರಿಸಿ ಮಾಧ್ಯಮಗಳ ಮುಂದೆ ಬಂದು ಪೊಲೀಸರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಳು.
ಹಲವು ಮಂದಿ ಮಹಿಳೆ ಮೇಲಿನ ದೌರ್ಜನ್ಯವೆಂದು ಪೊಲೀಸರ ನಡೆ ವಿರುದ್ಧ ಕಿಡಿಕಾರಿದ್ದರು. ಆದರೆ ಕೆಲ ಸಮಯದ ಬೆನ್ನಲ್ಲೇ ಇದೇ ಜ್ಯೋತಿ ಅವಾಚ್ಯ ಶಬ್ದಗಳಿಂದ ಸಿದ್ದರಾಮಯ್ಯ ಸರ್ಕಾರ ಹಾಗೂ ಮುಸ್ಲಿಂ ಸಮುದಾಯದ ಜನರನ್ನು ತೀರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೊವೊಂದು ಲಭ್ಯವಾಯಿತು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜ್ಯೋತಿಯ ಡ್ರಾಮಾ ಬಟಾಬಯಲಾಗಿತ್ತು. ಸದ್ಯ ಇದೇ ಜ್ಯೋತಿ ವಿರುದ್ದ ಇದೀಗ ಕೋಮುಗಲಭೆ ಪ್ರಚೋದನೆ ಆರೋಪದ ಮೇರೆಗೆ ಮದ್ದೂರು ಪೊಲೀಸರು ಸುಮೊಟೊ ದೂರು ದಾಖಲಿಸಿಕೊಂಡಿದ್ದಾರೆ.
ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ; ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


