ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಅತ್ಯಾಚಾರ ಹಾಗೂ ಕೊಲೆಗಳು ನಡೆದಿವೆ ಎಂದು ಚಿನ್ನಯ್ಯ ಮಾಡಿದ್ದ ಆರೋಪದ ಮೇಲೆ ಸದ್ಯ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಸದ್ಯ ಚಿನ್ನಯ್ಯ ಬಂಧನದಲ್ಲಿದ್ದಾನೆ.
ಚಿನ್ನಯ್ಯನ ವಿಚಾರಣೆ ಮುಗಿಸಿರುವ ಎಸ್‌ಐಟಿ ಅಧಿಕಾರಿಗಳು ಸದ್ಯ ಯುಟ್ಯೂಬರ್ ಅಭಿಷೇಕ್, ಮನಾಫ್, ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಟಿ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಹೀಗೆ ಪ್ರಕರಣದ ತನಿಖೆ ಭರದಿಂದ ನಡೆಯುತ್ತಿರುವಾಗಲೇ ಗಿರೀಶ್ ಮಟ್ಟಣ್ಣವರ್ ಹಾಗೂ ಮತ್ತೋರ್ವ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವೆ ಎಲ್ಲವೂ ಸರಿಯಿಲ್ಲ, ಚಿನ್ನಯ್ಯನ ಬಂಧನದ ಬಳಿಕ ಇಬ್ಬರ ನಡುವೆ ಕಿತ್ತಾಟ ನಡೆದಿದೆ ಹಾಗೂ ದೂರವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಈ ಇಬ್ಬರೂ ಆ ಬಳಿಕ ಹೆಚ್ಚಾಗಿ ಒಟ್ಟಿಗೆ ಕಾಣಸಿಕೊಳ್ಳದ ಕಾರಣ ಈ ರೀತಿಯ ಗುಸುಗುಸು ಆರಂಭವಾಗಿತ್ತು. ಆದರೆ ಈ ಎಲ್ಲ ಅನುಮಾನಗಳಿಗೆ ಇದೀಗ ಡಿ ಟಾಕ್ಸ್ ಯುಟ್ಯೂಬ್ ಚಾನೆಲ್ ತೆರೆ ಎಳೆದಿದೆ.
ನಿನ್ನೆ ( ಸೆಪ್ಟೆಂಬರ್ 11 ) ರಾತ್ರಿ ಎಸ್‌ಐಟಿ ಕಚೇರಿ ಬಳಿ ಗಿರೀಶ್ ಮಟ್ಟಣ್ಣವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಇಬ್ಬರೂ ಸಹ ಪರಸ್ಪರ ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಎಸ್‌ಐಟಿಗೆ ದೂರೊಂದನ್ನು ನೀಡಲು ಬಂದಿದ್ದು, ಅದೇ ಸಮಯದಲ್ಲಿ ಎಸ್‌ಐಟಿ ವಿಚಾರಣೆ ಮುಗಿಸಿ ಹಿಂದಿರುಗುತ್ತಿದ್ದ ಗಿರೀಶ್ ಮಟ್ಟಣ್ಣವರ್ ನಗು ನಗುತ್ತಾ ಮಾತನಾಡಿದ್ದಾರೆ. ಈ ಫೋಟೊವನ್ನು ಡಿ ಟಾಕ್ಸ್ ತನ್ನ ಯುಟ್ಯೂಬ್ ಚಾನೆಲ್ ಕಮ್ಯುನಿಟಿಯಲ್ಲಿ ಹಂಚಿಕೊಂಡಿದೆ.
ಡಿ ಟಾಕ್ಸ್ ಪೋಸ್ಟ್‌ಗೆ ಇಲ್ಲಿ ಕ್ಲಿಕ್ ಮಾಡಿ
ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ; ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


