ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ ರಾತ್ರೋರಾತ್ರಿ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಟನ್‌ಪೇಟೆ ಪೊಲೀಸರು ಓರ್ವ ಆರೋಪಿಯನ್ನು ನಿನ್ನೆ (ಜನವರಿ 13) ರಾತ್ರಿ ಬಂಧಿಸಿದ್ದಾರೆ ಹಾಗೂ ಆತನನ್ನು ಕರೆದೊಯ್ದು ಸ್ಥಳ ಮಹಜರನ್ನು ನಡೆಸಿದ್ದಾರೆ.
ಏನಿದು ಪ್ರಕರಣ?
ಹಸುಗಳನ್ನು ದೇವರೆಂದು ನಂಬಿ ಪೂಜಿಸುವ ಹಬ್ಬ ಸಂಕ್ರಾಂತಿ ಸಮೀಪದಲ್ಲೇ ಬೆಂಗಳೂರಿನ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ನಿವಾಸಿ ಕರ್ಣ ಎಂಬುವವರು ಸಾಕಿದ್ದ ಹಸುಗಳ ಮೇಲೆ ಮಚ್ಚಿನಿಂದ ದಾಳಿ ನಡೆದಿತ್ತು. ಶನಿವಾರ ರಾತ್ರಿ ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ದರು ಹಾಗೂ ಮಚ್ಚಿನಿಂದ ಕಾಲಿಗೆ ಹೊಡೆದು ಗಾಯಗೊಳಿಸಿದ್ದರು.
ಈ ಘಟನೆ ಕಂಡ ಕೂಡಲೇ ಹಸುಗಳ ಮಾಲೀಕ ಕರ್ಣ ಕಾಟನ್‌ಪೇಟೆ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ನಿನ್ನೆ ರಾತ್ರಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕಿದ್ದು, ಸಿಕ್ಕಿ ಬಿದ್ದಿರುವ ಈತನ ಜತೆ ಇನ್ನೂ ಎಷ್ಟು ಜನ ಶಾಮೀಲಾಗಿದ್ದಾರೆ ಎಂಬುದು ತನಿಖೆಯಲ್ಲಿ ಹೊರಬರಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


