ಬೆಂಗಳೂರು: ನಟಿ ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವ ವೇಳೆ ಸಿಕ್ಕಿಬಿದ್ದು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದ್ದಾರೆ.
ಹೌದು, ರನ್ಯಾ ಈ ಕೃತ್ಯ ಎಸಗಲು ಕಲೆ ಸಚಿವರ ಸಾಥ್ ಎಂಬ ಸುದ್ದಿಗಳು ಹರಿದಾಡಿದ್ದು, ಬಿಜೆಪಿ ಇದನ್ನೇ ಗಂಭೀರವಾಗಿ ಆರೋಪಿಸಿದೆ. ಇನ್ನು ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು ತನಿಖೆ ನಡೆಯುತ್ತಿದೆ ಎಲ್ಲ ಸತ್ಯ ಹೊರಬರಲಿದೆ ಎಂದಿದೆ.
ಇದರ ಬೆನ್ನಲ್ಲೇ ರನ್ಯಾ ವಿರುದ್ಧ ಸಿಐಡಿ ತನಿಖೆಗೆ ಆದೇಶ ನೀಡಿದ್ದ ರಾಜ್ಯ ಸರ್ಕಾರ ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನು ಹಿಂಪಡೆದದ್ದು ಗೊಂದಲವನ್ನು ಉಂಟುಮಾಡಿತ್ತು ಹಾಗೂ ಅನುಮಾನಕ್ಕೂ ಎಡೆಮಾಡಿಕೊಟ್ಟಿತ್ತು.
ರಾಜ್ಯ ಸರ್ಕಾರದ ಮೇಲೆ ಯಾರಾದರೂ ಒತ್ತಡ ಹೇರಿ ಸಿಐಡಿ ತನಿಖೆ ಹಿಂಪಡೆಯುವಂತೆ ಮಾಡಿದ್ರಾ ಎಂಬ ಪ್ರಶ್ನೆಯೂ ಸಹ ಮೂಡಿತ್ತು. ಇದಕ್ಕೀಗ ಗೃಹಸಚಿವ ಪರಮೇಶ್ವರ್ ಉತ್ತರವನ್ನು ನೀಡಿದ್ದು, ಡಿಪಿಆರ್ ಕಡೆಯಿಂದ ಈಗಾಗಲೇ ಒಂದು ತನಿಖೆ ಆರಂಭವಾಗಿದೆ, ಹೀಗಾಗಿ ಎರಡೆರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಆದೇಶ ಹಿಂಪಡೆದೆವು, ಇದನ್ನು ಹೊರತುಪಡಿಸಿ ಯಾರದ್ದೂ ಸಹ ಒತ್ತಡವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ತಾವು ಹಾಗೂ ಸಿದ್ದರಾಮಯ್ಯ ರನ್ಯಾ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಫೋಟೊ ವೈರಲ್ ಆಗಿರುವುದರ ಕುರಿತು ಕೇಳುತ್ತಿದ್ದಂತೆ ಅಯ್ಯಾ.. ಸಾವಿರ ಮದುವೆಗೆ ಹೋಗ್ತೀವಿ ನಡೀರಿ.. ಎನ್ನುತ್ತಾ ಕಾರ್ ಹತ್ತಿ ಹೊರಟರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


