ಜೈಪುರ: ಇಂದು ( ಏಪ್ರಿಲ್ 13 ) ಜೈಪುರದಲ್ಲಿ ರಾಯಲ್ಸ್ ಮುಖಾಮುಖಿಯಾಗಲಿವೆ. ಮಧ್ಯಾಹ್ನ 3.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.
2009ರಿಂದ ಈ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮರಗಳನ್ನು ಬೆಳೆಸಬೇಕು ಎಂಬ ಸಂದೇಶವನ್ನು ಸಾರುತ್ತಿದೆ. ಇಂತಹ ಒಳ್ಳೆ ಉದ್ದೇಶದಿಂದ ಉಳಿದ ಯಾವ ತಂಡವೂ ಸಹ ಮಾಡದಿರುವ ಕೆಲಸವನ್ನು ಆರ್‌ಸಿಬಿ ಮಾಡುತ್ತಿದ್ದು ಇದಕ್ಕೆಂದು ವಿಶೇಷವಾದ ಗೌರವ ಸಂಪಾದಿಸಿದೆ.
ಇನ್ನು ಈ ಗ್ರೀನ್ ಜೆರ್ಸಿ ತೊಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿದಾಗಲೆಲ್ಲ ಗೆಲುವಿಗಿಂತ ಸೋಲೇ ಹೆಚ್ಚು ಎಂಬುದನ್ನು ಹೇಳುತ್ತಿವೆ ಹಳೆಯ ಅಂಕಿಅಂಶಗಳು. ಹೌದು, ಇಲ್ಲಿಯವರೆಗೂ ಒಟ್ಟು 14 ಪಂದ್ಯಗಳಲ್ಲಿ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದು, ಈ ಪೈಕಿ ಕೇವಲ 4 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ ಹಾಗೂ 9 ಪಂದ್ಯಗಳಲ್ಲಿ ಸೋತಿದೆ, ಇನ್ನುಳಿದ ಒಂದು ಪಂದ್ಯ ಫಲಿತಾಶವಿಲ್ಲದೇ ಅಂತ್ಯಗೊಂಡಿದೆ.
ಹೀಗೆ ಗ್ರೀನ್ ಜೆರ್ಸಿಯಲ್ಲಿ ಕೆಟ್ಟ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಆರ್‌ಸಿಬಿ ಈ ಬಾರಿ ಯಾವ ರೀತಿಯ ಫಲಿತಾಂಶ ಪಡೆದುಕೊಳ್ಳಲಿದೆ ನೋಡಬೇಕಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಆರ್‌ಸಿಬಿ ಒಂದು ರನ್‌ನಿಂದ ಸೋತಿತ್ತು. 2023ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ಆರ್‌ಸಿಬಿ 7 ರನ್‌ಗಳ ಗೆಲುವು ಕಂಡಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


