Friday, August 7, 2026
spot_img
More
    spot_img
    HomeSportsCricketIPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡ ಆರ್‌ಸಿಬಿ!

    IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡ ಆರ್‌ಸಿಬಿ!

    ಜೈಪುರ: ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ ನಾಲ್ಕನೇ ಗೆಲುವನ್ನು ಸಾಧಿಸಿದೆ.

    Advertisement

    ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿತ್ತು.

    ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದೆ.

    ಈ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ಪಾಯಿಂಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಈ ಪಂದ್ಯದ ಮೂಲಕ ಅಂಕಪಟ್ಟಿ ಈ ಕೆಳಕಂಡಂತಿದೆ..

    ಡೆಲ್ಲಿ ಕ್ಯಾಪಿಟಲ್ಸ್: 4 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು ಸಾಧಿಸಿ 8 ಅಂಕ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. ( +1.278)

    ಗುಜರಾತ್ ಟೈಟನ್ಸ್: 6 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. (+1.101)

    ರಾಯಲ್ ಚಾಲೆಂಜರ್ಸ್ ಬೆಂಗಳೂರು: 6 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. (+0.672)
    ಲಕ್ನೋ ಸೂಪರ್ ಜೈಂಟ್ಸ್: 6 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ನಾಲ್ಕನೆ ಸ್ಥಾನದಲ್ಲಿದೆ. (+0.162)

    ಕೊಲ್ಕತ್ತಾ ನೈಟ್ ರೈಡರ್ಸ್: 6 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋತು ಐದನೇ ಸ್ಥಾನದಲ್ಲಿದೆ. (+0.803)
    ಪಂಜಾಬ್ ಕಿಂಗ್ಸ್: 5 ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತು ಆರನೇ ಸ್ಥಾನದಲ್ಲಿದೆ. (+0.065)
    ರಾಜಸ್ಥಾನ್ ರಾಯಲ್ಸ್: 6 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 4 ಪಂದ್ಯದಲ್ಲಿ ಸೋತು ಏಳನೇ ಸ್ಥಾನದಲ್ಲಿದೆ. (-0.838)

    ಸನ್‌ರೈಸರ್ಸ್ ಹೈದರಾಬಾದ್: 6 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 4 ಪಂದ್ಯದಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ. (-1.245)
    ಮುಂಬೈ ಇಂಡಿಯನ್ಸ್: 5 ಪಂದ್ಯಗಳನ್ನಾಡಿ 1ರಲ್ಲಿ ಗೆದ್ದು, 4 ಪಂದ್ಯದಲ್ಲಿ ಸೋತು ಒಂಬತ್ತನೇ ಸ್ಥಾನದಲ್ಲಿದೆ. (-0.010)
    ಚೆನ್ನೈ ಸೂಪರ್ ಕಿಂಗ್ಸ್: 6 ಪಂದ್ಯಗಳನ್ನಾಡಿ 1ರಲ್ಲಿ ಗೆದ್ದು 5 ಪಂದ್ಯದಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. (-1.554)

    ( ಆವರಣದೊಳಗೆ ಇರುವ ಅಂಕಿಅಂಶ ನೆಟ್‌ ರನ್ ರೇಟ್ )


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading