ಹೈದರಾಬಾದ್: ನಿನ್ನೆ ( ಏಪ್ರಿಲ್ 12 ) ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಟಾಪ್ ಆರ್ಡರ್ ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅಬ್ಬರದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ಸನ್‌ರೈಸರ್ಸ್ ಹೈದರಾಬಾದ್‌ಗೆ 246 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.
ಈ ಬೃಹತ್ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ 171 ರನ್‌ಗಳ ಅಬ್ಬರದ ಓಪನಿಂಗ್ ಜತೆಯಾಟ, ಅದರಲ್ಲಿಯೂ ಅಭಿಷೇಕ್ ಶರ್ಮ ದಾಖಲೆಯ ಇನ್ನಿಂಗ್ಸ್ ನೆರವಿನಿಂದ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಇನ್ನೂ 9 ಎಸೆತ ಬಾಕಿ ಇರುವಾಗಲೇ 8 ವಿಕೆಟ್‌ಗಳ ಗೆಲುವು ದಾಖಲಿಸಿತು.
ಸನ್ ರೈಸರ್ ಹೈದರಾಬಾದ್ ಪರ 55 ಎಸೆತಗಳಲ್ಲಿ ಬರೋಬ್ಬರಿ 141 ರನ್ ಚಚ್ಚಿದ ಅಭಿಷೇಕ್ ಶರ್ಮ ಬೃಹತ್ ಮೊತ್ತ ಕಲೆಹಾಕಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪಂಜಾಬ್ ಕಿಂಗ್ಸ್ ಆಟಗಾರರಿಗೆ ನಿರಾಸೆ ಮೂಡಿಸಿದರು. 8 ಎಸೆತಗಳಲ್ಲಿ 18 ರನ್ ಗಳಿಸಿದ್ದಾಗ ಕ್ಯಾಚ್ ನೀಡಿ ನೋಬಾಲ್ ಆದ ಕಾರಣ ಜೀವ ಉಳಿಸಿಕೊಂಡ ಅಭಿಷೇಕ್ ಶರ್ಮಾ ತದನಂತರ 40 ನಿಷೇಧಗಳಲ್ಲಿ ಶತಕವನ್ನು ಪೂರೈಸಿ ಅತಿ ಅಪರೂಪದ ಸಂಭ್ರಮಾಚರಣೆಯನ್ನು ಮಾಡಿದರು.
ಚೀಟಿಯೊಂದನ್ನು ತೆಗೆದ ಅಭಿಷೇಕ್ ಶರ್ಮ ಅದನ್ನು ಪ್ರದರ್ಶಿಸಿದರು. ಈ ಶತಕ ಆರೆಂಜ್ ಆರ್ಮಿ ಅಭಿಮಾನಿಗಳಿಗಾಗಿ ಎಂದು ಚೀಟಿಯಲ್ಲಿ ಬರೆದಿದ್ದ ಅಭಿಷೇಕ್ ಶರ್ಮ ತಮ್ಮ ಶತಕವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಅರ್ಪಿಸಿದರು. ಈ ಸಂಭ್ರಮಾಚರಣೆ ಸದ್ಯ ಇಂಟರ್ನೆಟ್ ವೈರಲ್ ಕಂಟೆಂಟ್ ಆಗಿ ಪರಿಣಮಿಸಿದ್ದು, ಎಲ್ಲೆಡೆ ಇದರ ಕುರಿತು ಚರ್ಚೆ ನಡೆಯುತ್ತಿವೆ. ಪಂದ್ಯ ಮುಗಿದ ಬಳಿಕ ಅಭಿಷೇಕ್ ಶರ್ಮ ಈ ಸೆಲಬ್ರೇಶನ್ ಮಾಡಿದಾಗ ಕಣದಲ್ಲಿದ್ದ ಹೆಡ್ ಈ ಚೀಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಅಸಲಿಯತ್ತಿಗೆ ಅಭಿಷೇಕ್ ಶರ್ಮ ಟೂರ್ನಿಯ ಮೊದಲ ಪಂದ್ಯದಿಂದಲೂ ಈ ಚೀಟಿಯನ್ನು ತೋರಿಸಿ ಅಭಿಮಾನಿಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದುಕೊಂಡಿದ್ದರಂತೆ. ಆದರೆ ಕಳೆದ ಐದು ಪಂದ್ಯಗಳಲ್ಲಿಯೂ ಅಭಿಷೇಕ್ ಶರ್ಮ ಕಳಪೆ ಪ್ರದರ್ಶನ ನೀಡಿದ ಕಾರಣ ಈ ಚೀಟಿಯನ್ನು ಅಷ್ಟು ಪಂದ್ಯಗಳಲ್ಲಿಯೂ ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಿದ್ದರಂತೆ. ಈ ವಿಷಯವನ್ನ ಪಂದ್ಯ ಮುಗಿದ ಬಳಿಕ ಹೆಡ್ ಬಹಿರಂಗಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


