Saturday, August 8, 2026
spot_img
More
    spot_img
    HomeTop StoryIPL 2025: ಕೈಗೆ ಬಂದ ಕ್ಯಾಚ್ ಬಿಟ್ಟು ರಾಜಸ್ಥಾನ್ ರನ್ ಹೆಚ್ಚಿಸಿದ ವಿರಾಟ್ ಕೊಹ್ಲಿ, ದಯಾಳ್!

    IPL 2025: ಕೈಗೆ ಬಂದ ಕ್ಯಾಚ್ ಬಿಟ್ಟು ರಾಜಸ್ಥಾನ್ ರನ್ ಹೆಚ್ಚಿಸಿದ ವಿರಾಟ್ ಕೊಹ್ಲಿ, ದಯಾಳ್!

    ಜೈಪುರ: ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.

    Advertisement

    ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿರುವ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿದೆ.

    ಇನ್ನು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡರ್‌ಗಳು ಎರಡು ಬಾರಿ ಸುಲಭವಾದ ಕ್ಯಾಚ್ ಬಿಟ್ಟಿದ್ದಾರೆ. ಮೊದಲಿಗೆ ಸುಯಶ್ ಶರ್ಮಾ ಎಸೆದ ಹತ್ತನೇ ಓವರ್‌ನ ಐದನೇ ಎಸೆತದಲ್ಲಿ ರಿಯಾನ್ ಪರಾಗ್ ಕ್ಯಾಚ್ ಅನ್ನು ಯಶ್ ದಯಾಳ್ ಕೈಚೆಲ್ಲಿದರು. ಕೇವಲ 9 ರನ್ ಗಳಿಸಿದ್ದ ಪರಾಗ್ ಕ್ಯಾಚ್ ಬಿಟ್ಟ ಕಾರಣ 30 ರನ್ ಪೇರಿಸಿದರು.

    ಇನ್ನು ಮತ್ತೆ ಸುಯಶ್ ಶರ್ಮಾ ಎಸೆದ 17ನೇ ಓವರ್‌ನ ಅಂತಿಮ ಎಸೆತದಲ್ಲಿ ಧ್ರುವ್ ಜುರೆಲ್ ಸುಲಭ ಕ್ಯಾಚನ್ನು ಕೊಹ್ಲಿ ಕೈಚೆಲ್ಲಿದರು. ಆ ಸಂದರ್ಭದಲ್ಲಿ 11 ರನ್ ಬಾರಿಸಿದ್ದ ಧ್ರುವ್ ಜುರೆಲ್ ಕೊನೆಯ ಅಜೇಯ 35 ರನ್ ಬಾರಿಸಿದರು. ಹೀಗೆ ಕ್ಯಾಚ್ ಬಿಟ್ಟು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 45 ರನ್ ( ಜೀವದಾನದ ಬಳಿಕ ಧ್ರುವ್ ಜುರೆಲ್ ಹಾಗೂ ರಿಯಾನ್ ಪರಾಗ್ ಬಾರಿಸಿದ ರನ್ ) ಹೆಚ್ಚಳಕ್ಕೆ ಈ ಇಬ್ಬರು ಕಾರಣವಾದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading