ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಜಾತಿಗಣತಿ ವರದಿ ಸದ್ಯ ರಾಜ್ಯ ರಾಜಕಾರಣದಲ್ಲಿ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕಾಂಗ್ರೆಸ್ ನಾಯಕರು ಸಿದ್ಧಪಡಿಸಲಾಗಿರುವ ಈ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಸರಿಯಾಗಿದೆ ಎಂದರೆ, ವಿರೋಧ ಪಕ್ಷಗಳು ಇದೊಂದು ಅವೈಜ್ಞಾನಿಕ ವರದಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವರದಿ ಬಗ್ಗೆ ಏಪ್ರಿಲ್ 17ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ವರದಿಯಲ್ಲಿನ ಜಾತಿವಾರು ಜನಸಂಖ್ಯೆ ಎಷ್ಟಿದೆ ಎಂಬ ಅಂಶ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು, ಇಂತಹ ಜಾತಿಯಲ್ಲಿ ಇಷ್ಟು ಜನರಿದ್ದಾರೆ ಎಂಬ ಪಟ್ಟಿ ವೈರಲ್ ಆಗಿದೆ.
ಒಟ್ಟಾರೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆ ಕೋಟಿಗೂ ಹೆಚ್ಚಿದ್ದು, ಇಲ್ಲಿ 108 ವಿವಿಧ ಜಾತಿಗಳು ಬರುವ ಕಾರಣ 75 ಲಕ್ಷ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯವೇ ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿ ಎನ್ನಲಾಗುತ್ತಿದೆ.
ಈ ಕುರಿತು ಗೃಹಸಚಿವ ಜಿ ಪರಮೇಶ್ವರ್ ಮಾತನಾಡಿದ್ದು ಸಮಿತಿ ಸರಿಯಾಗಿ ವರದಿ ಸಿದ್ಧಪಡಿಸಿದೆ ಎಂದಿದ್ದಾರೆ. ಅಲ್ಲದೇ 1 ಕೋಟಿ 37 ಲಕ್ಷ ಕುಟುಂಬಗಳ ಮನೆ ಮನೆಗೂ ತೆರಳಿ ಸಹಿ ಪಡೆದುಕೊಂಡು ಗಣತಿ ಮಾಡಲಾಗಿದೆ, ಬೇಕಿದ್ದರೆ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸಾಕ್ಷಿ ಇದೆ ಚೆಕ್ ಮಾಡಿಕೊಳ್ಳಿ ಎಂದು ಹೇಳಿದರು.
ಅಲ್ಲದೇ ವರದಿ ಪರಿಶೀಲಿಸಿದ ಬಳಿಕ ಚರ್ಚೆ ನಡೆಯಲಿದೆ. ಒಂದುವೇಳೆ ತಪ್ಪುಗಳು ಕಂಡುಬಂದರೆ ಉತ್ತರ ಏನು ಕೊಡಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳೋಣ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


