ಹುಬ್ಬಳ್ಳಿಯಲ್ಲಿ ನಡೆದಿರುವ ಐದು ವರ್ಷದ ಬಾಲಕಿಯ ಹತ್ಯೆ ನಗರವನ್ನು ಬೆಚ್ಚಿ ಬೀಳಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗುವನ್ನು ಯುವಕನೋರ್ವ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಕೊಪ್ಪಳ ಮೂಲದ ದಂಪತಿಗಳು ಹುಬ್ಬಳ್ಳಿಯ ಅಶೋಕನಗರದಲ್ಲಿ ವಾಸವಿದ್ದರು. ಪತಿ ಪೈಂಟಿಂಗ್ ಕೆಲಸ ಮಾಡಿದರೆ, ಪತ್ನಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಇಬ್ಬರಿಗೆ ಐದು ವರ್ಷದ ಮಗಳಿದ್ದು, ಬೆಳಗ್ಗೆ ಹನ್ನೊಂದು ಗಂಟೆಗೆ ಮನೆ ಕೆಲಸಕ್ಕೆಂದು ತೆರಳಿದ್ದ ಆಕೆಯ ತಾಯಿ ಜೊತೆಯಲ್ಲಿ ಮಗುವನ್ನೂ ಕರೆದುಕೊಂಡು ಹೋಗಿದ್ದರು.
ಹೀಗೆ ಮನೆ ಕೆಲಸದಲ್ಲಿ ತಾಯಿ ನಿರತಳಾಗಿದ್ದರೆ, ಇತ್ತು ಪುಟ್ಟ ಬಾಲಕಿ ತನ್ನ ಪಾಡಿಗೆ ತಾನು ಮನೆಯಿಂದ ಹೊರಗೆ ಆಟವಾಡುತ್ತಾ ನಿಂತಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಕರೆದುಕೊಂಡು ಹೋಗಿದ್ದಾನೆ.
ಮಗು ಕಾಣದ ಕಾರಣ ತಾಯಿ ಹಾಗೂ ಜನರು ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಸಮೀಪದಲ್ಲೇ ಇದ್ದ ಪಾಳು ಮನೆಯೊಂದರಲ್ಲಿ ಬಾಲಕಿ ಪ್ರಜ್ಞೆ ಇಲ್ಲದೇ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಬಾಲಕಿ ಮೃತಪಟ್ಟಿದ್ದಳು.
ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಸ್ಥಳೀಯರು ಬಿಹಾರ ಮೂಲದ ಯುವಕನೋರ್ವನ ವಿರುದ್ಧ ದೂರಿದ್ದು, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


