ಸಂಜೆಯ ಸಮಯದಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೂ ಬಿಸಿ ಬಿಸಿ, ಆರೋಗ್ಯಕರ ಮತ್ತು ರುಚಿಕರ ಸ್ನ್ಯಾಕ್ಸ್ ಬೇಕು ಅನ್ನೋದು ಸಹಜ. ಯಾವಾಗಲೂ ಅದೇ ಬಜ್ಜಿ, ಬೋಂಡಾ ಮಾಡಿ ಬೇಜಾರಾಗಬಹುದು. ಹಾಗಾಗಿ, ಈ ಬಾರಿ ಡಿಫರೆಂಟ್ ಆಗಿ ಮೂಂಗ್‌ದಾಲ್ (ಹೆಸರು ಬೇಳೆ) ನಗ್ಗೆಟ್ಸ್ ಮಾಡಿ ನೋಡಿ. ಇದು ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೂ ಇಷ್ಟವಾಗುತ್ತದೆ.ಅದಕ್ಕೆ ಈ ರೀತಿ ಡಿಫರೆಂಟ್ ಆಗಿ ನಗ್ಗೆಟ್ಸ್ ಮಾಡಿದರೆ ಸ್ವಲ್ಪ ಚೇಂಜಸ್ ಜೊತೆಗೆ ಹೊಸ ರುಚಿ ಸವಿದಂತಾಗುತ್ತದೆ. ಅದರಲ್ಲೂ ಮೂಂಗ್‌ದಾಲ್ ನಗ್ಗೆಟ್ಸ್ ಆರೋಗ್ಯಕ್ಕೂ ಒಳ್ಳೆಯದಾಗಿದ್ದೂ, ಮಕ್ಕಳಿಗೂ ಸಹ ಸಂಜೆ ಟೈಂಗೆ ಕೊಡುವಂತಹ ಬೆಸ್ಟ್ ಸ್ನ್ಯಾಕ್ಸ್ ಆಗಿದೆ.
ದೊಡ್ಡವರಿಗೂ ಚಹಾ, ಕಾಫಿ ಕುಡಿಯುವಾಗ ಈ ಮೂಂಗ್‌ದಾಲ್ ನಗ್ಗೆಟ್ಸ್ ತಿಂದರೆ ಒಳ್ಳೆಯ ಸ್ನ್ಯಾಕ್ಸ್ ಟೈಂ ಆಗುತ್ತದೆ. ಹೆಸರುಬೇಳೆ ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿದ್ದು, ನಮ್ಮ ದಿನನಿತ್ಯದ ಆಹಾರದಲ್ಲಿ ಇದನ್ನು ಒಳಗೂಡಿಸಿದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನಬಹುದಾದ ಮೂಂಗ್‌ದಾಲ್ (ಹೆಸರು ಬೇಳೆ) ನಗ್ಗೆಟ್ಸ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ – 1/2 ಕಪ್
ಹೆಚ್ಚಿದ ಈರುಳ್ಳಿ – ಅರ್ಧ
ಹೆಚ್ಚಿದ ಕ್ಯಾರೆಟ್ – ಕಾಲು ಕಪ್
ಕರಿಬೇವು – 6ರಿಂದ 7 ಎಲೆ
ಬ್ರೆಡ್ ತುಂಡುಗಳು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಪೆಪ್ಪರ್ ಪೌಡರ್ – ಕಾಲು ಚಮಚ
ಚಾಟ್ ಮಸಾಲ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಜೋಳದ ಹಿಟ್ಟು – 2 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಹೆಸರುಬೇಳೆಗಳನ್ನು ಚೆನ್ನಾಗಿ ತೊಳೆದು, ನಂತರ 2-3 ಗಂಟೆಗಳ ಕಾಲ ನೆನೆಸಿಡಿ.
ನೆನೆಸಿದ ಹೆಸರುಬೇಳೆಯನ್ನು ಅರ್ಧಷ್ಟು ನೀರಿನಲ್ಲಿ ಬೇಯಿಸಿ, ನಂತರ ತಣಿಸಿ ಬಿಡಿ.
ತಣಿದ ಬೆಳೆದ ಹೆಸರುಬೇಳೆಯ 2 ಚಮಚವನ್ನು ಬೇರ್ಪಡಿಸಿ ಉಳಿದವನ್ನು ಮಿಕ್ಸರ್‌ನಲ್ಲಿ ಹಾಕಿ ಮೃದುವಾಗಿ ರುಬ್ಬಿ.
ಒಂದು ಬೌಲ್‌ನಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ, ಅದಕ್ಕೆ ಬೇಯಿಸಿದ ಹೆಸರುಬೇಳೆ, ಕತ್ತರಿಸಿದ ತರಕಾರಿಗಳು, ಮಸಾಲೆಗಳು, ಉಪ್ಪು ಮತ್ತು ಬ್ರೆಡ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ ಹಿಟ್ಟಿನಂತೆ ತಯಾರಿಸಿಕೊಳ್ಳಿ.
ಈ ಹಿಟ್ಟಿನಿಂದ ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದು ನಿಮಗೆ ಇಷ್ಟವಾದ ಆಕಾರದಲ್ಲಿ ಎಲ್ಲವನ್ನೂ ತಯಾರಿಸಿ ಹಾಕಿಕೊಳ್ಳಿ.
ಈಗ ಏರ್‌ಫ್ರೈಯರ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಮುಂಚಿತವಾಗಿ ಬಿಸಿ ಮಾಡಿ, ನಂತರ ನಗ್ಗೆಟ್ಸ್ ಮೇಲೆ ಸ್ವಲ್ಪ ಎಣ್ಣೆ ಸವರಿಸಿ ಏರ್‌ಫ್ರೈಯರ್‌ನಲ್ಲಿ 15 ನಿಮಿಷಗಳ ಕಾಲ ಅಥವಾ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ.
ಬದಲಾಗಿ, ನಗ್ಗೆಟ್ಸ್ ಅನ್ನು ಎಣ್ಣೆಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದು ಕೂಡ ತಯಾರಿಸಬಹುದು.
ಹುರಿದು ತಯಾರಾದ ನಗ್ಗೆಟ್ಸ್ ಅನ್ನು ಬಿಸಿಬಿಸಿಯಾಗಿ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ತಿನಿಸು ಸಿದ್ಧವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


