ಅಹ್ಮದಾಬಾದ್: ಏರ್‌ಇಂಡಿಯಾ ( ಎಐ 171 ) ವಿಮಾನ ನಿನ್ನೆ ( ಜೂನ್ 12 ) ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣದಿಂದ ಟೇಕ್‌ಆಫ್ ಆಗಿ ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಅಪ್ಪಳಿಸುವ ಮೂಲಕ ದುರಂತ ಅಂತ್ಯ ಕಂಡಿದೆ.
12 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿಯನ್ನು ಹೊತ್ತು ಲಂಡನ್ ತಲುಪುವ ಉದ್ದೇಶದಿಂದ ಹಾರಿದ ವಿಮಾನ 40 ಸೆಕೆಂಡ್‌ಗಳಲ್ಲಿ ಮೇಘಾನಿ ನಗರ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿದ್ದು, ಹಾಸ್ಟೆಲ್‌ನ 24 ಮಂದಿ ಹಾಗೂ ವಿಮಾನದಲ್ಲಿದ್ದ 241 ಮಂದಿ ಸೇರಿ ಒಟ್ಟು 265 ಮಂದಿ ಕೊನೆಯುಸಿರೆಳೆದಿದ್ದಾರೆ.
ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಸಿಬ್ಬಂದಿಗಳ ಪೈಕಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ರೋಶ್ನಿ ರಾಜೇಂದ್ರ ಸೊಂಘಾರೆ ಮೃತಪಟ್ಟಿದ್ದು, ಇನ್ನೇನು ಕೆಲ ದಿನಗಳಲ್ಲಿ ಇವರು ಸಪ್ತಪದಿ ತುಳಿಯುವವರಿದ್ದರು ಎಂದು ಮೂಲಳು ತಿಳಿಸಿವೆ.
27 ವರ್ಷದ ರೋಶ್ನಿ ಇನ್ಸ್ಟಾಗ್ರಾಮ್ ಇನ್ಫ್ಯುಯೆನ್ಸರ್ ಸಹ ಆಗಿದ್ದು, ಸಾಯುವ ಮುನ್ನ 54000 ಸಾವಿರ ಫಾಲೋವರ್ ಹೊಂದಿದ್ದ ಇವರಿಗೆ ನಿಧನದ ಬಳಿಕ ಹಿಂಬಾಲಕರ ಸಂಖ್ಯೆ 60,000ಕ್ಕೆ ತಲುಪಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


