ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಸಮಾವೇಶದಲ್ಲಿ ಮಾತನಾಡಿದ ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಭಯೋತ್ಪಾದನೆ, ಜನೋತ್ಪಾದನೆಯೇ ಇವರ ಕೆಲಸ ಎಂದಿರುವ ಪ್ರತಾಪ್ ಸಿಂಹ ಇವರಿಗೆ ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟುತ್ತಿರುತ್ತವೆ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದಾರೆ.
ಪಾಕಿಸ್ತಾನದಲ್ಲಿ 15% ಹಿಂದೂಗಳಿದ್ರು, ಈಗ 1% ಇದ್ದಾರೆ, ಯುರೋಪ್‌ನಲ್ಲಿ ಐಫಿಲ್ ಟವರ್ ಕೆಳಗೆ ದನದ ಮಾಂಸ ತಿನ್ನುತ್ತಿದ್ದಾರೆ, ಅಮೆರಿಕಾದಲ್ಲಂತೂ ಹಿಡಿದು ದಬ್ಬುತ್ತಿದ್ದಾರೆ, ಇನ್ನು ಭಾರತದಲ್ಲಿ ಇರುವವರ ಸಂಖ್ಯೆಯೇ ಹೆಚ್ಚಿದೆ, ಇನ್ನು ಪಕ್ಕದಲ್ಲಿರುವವರೂ ಕೂಡ ಇಲ್ಲಿಗೆ ಬರುತ್ತಾ ಇದ್ದರೆ ನಾವು ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸಬೇಕು ಎಂದು ಆದೇಶವಾದಾಗ 22 ಜನ ನಮ್ಮ ದೇಶದ ಮಹಿಳೆಯರು ಪಾಕಿಸ್ತಾನದವರನ್ನು ಮದುವೆಯಾಗಿ 91 ಮಕ್ಕಳು ಹುಟ್ಟಿದ್ದಾವೆ. ನಮ್ಮ ಹೆಣ್ಣು ಮಕ್ಕಳು ಒಂದು ಮಗು ಆಗುವಷ್ಟರಲ್ಲಿ ಸೊಂಟನೇ ಜಾರಿಹೋಗುತ್ತೆ, ಅವರಿಗಂತೂ ಪುರುಸೊತ್ತಿಲ್ಲದೆನೇ ಹುಟ್ಟುತ್ತಾನೆ ಇರುತ್ತವೆ. ಒಂದೊಂದೇ ಮಕ್ಕಳು ಮಾಡಿಕೊಂಡಿರುವ ನಮ್ಮ ಮಕ್ಕಳ ಕಥೆ ಏನಾಗಬೇಕು, ಇರೋದು ಒಂದು ದೇಶ, ಹಿಂದೂಗಳಿಗೆ ತೊಂದರೆಯಾದರೆ ನಾವು ಎಲ್ಲಿಗೆ ಹೋಗೋಣ ಎಂದು ಪ್ರಶ್ನಿಸಿದರು.
ಮತ್ತೆ ಚುರುಕುಗೊಂಡ ಮುಂಗಾರು; ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆಯಾಗಲಿದೆ ಗೊತ್ತಾ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


