ನವದೆಹಲಿ: ದುಷ್ಕರ್ಮಿಗಳಿಬ್ಬರು ದೆಹಲಿ ನಿವಾಸಿಯೊಬ್ಬರ ಮೊಬೈಲ್‌ಫೋನ್ ಕಿತ್ತುಕೊಂಡು ಹೋಗಿದ್ದರಿಂದ ಆತನ ಪತ್ನಿಯ ಅಕ್ರಮ ಸಂಬಂಧ ಬಯಲಾಗಿದೆ.
ಜೂನ್ 19ರಂದು ದ್ವಿಚಕ್ರವಾಹನದಲ್ಲಿ ಬಂದಿದ್ದ ಇಬ್ಬರು ತನ್ನ ಮೊಬೈಲ್ ಕಿತ್ತುಕೊಂಡಿದ್ದಾರೆಂದು ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದ. ದೂರುದಾರನ ಪತ್ನಿಯೇ ಫೋನ್ ಕಿತ್ತುಕೊಳ್ಳುವ ಯೋಜನೆ ರೂಪಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಿಯಕರನೊಂದಿಗೆ ತಾನಿರುವ ಖಾಸಗಿ ಚಿತ್ರವಿದ್ದ ರಹಸ್ಯ ಮರೆಮಾಚುವ ಸಲುವಾಗಿ ಪತ್ನಿ ಈ ಕೃತ್ಯ ನಡೆಸಿದ್ದು ಬಯಲಾಗಿದೆ. ಫೋನ್ ಕಳ್ಳತನ ನಡೆದ ಪ್ರದೇಶದ 70 ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದ್ದು, ಸ್ಕೂಟಿಯ ನೋಂದಣಿ ಸಂಖ್ಯೆಯೂ ಗೊತ್ತಾಗಿತ್ತು. ಅದರ ಜಾಡು ಹಿಡಿದು ಹೊರಟಾಗ ವ್ಯಕ್ತಿಯ ಪತ್ನಿಯ ವಂಚನೆ ಜಾಲ ಬಯಲಾಗಿದೆ.
ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ನಾನು ಅಂತಾರೆ, ಡಿಕೆಶಿ ಕಡ್ಲೆಕಾಯಿ ತಿನ್ನಬೇಕಾ?; ಬಿಜೆಪಿ ಶಾಸಕ ಗರಂ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


