ತಿರುವನಂತಪುರಂ: ರಾಜ್ಯದ ಎರಡು ಸಿಬಿಎಸ್ಇ ಶಾಲೆಗಳಲ್ಲಿ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರ ಪಾದ ಪೂಜೆ ನಡೆಸುವಂತೆ ಮಾಡಿದ್ದಕ್ಕೆ ಕೇರಳದ ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಆಘಾತ ವ್ಯಕ್ತಪಡಿಸಿದ್ದಾರೆ.
ಗುರುಪೂರ್ಣಿಮೆಯ ದಿನ ಕಾಸರಗೋಡಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ಮಾಡಿದ್ದರು. ಈ ಘಟನೆಯನ್ನು ಖಂಡಿಸಿದ ಸಚಿವರು, ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದುದು. ವಿದ್ಯಾರ್ಥಿಗಳಲ್ಲಿ ಗುಲಾಮ ಮನಸ್ಥಿತಿಯನ್ನು ತುಂಬುವ ಇಂತಹ ಪದ್ಧತಿಗಳು ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಪ್ರಕರಣದ ಬಗ್ಗೆ ಎರಡೂ ಶಾಲೆಗಳ ಆಡಳಿತ ಮಂಡಳಿಗಳಿಂದ ವಿವರಣೆ ಕೇಳಲಾಗುತ್ತದೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ಈ ಹೊಣಿಯನ್ನು ವಹಿಸಲಾಗಿದೆ ಎಂದು ಶಿವನ್ಕಟ್ಟಿ ತಿಳಿಸಿದ್ದಾರೆ.
ಮತ್ತೆ ಚುರುಕುಗೊಂಡ ಮುಂಗಾರು; ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆಯಾಗಲಿದೆ ಗೊತ್ತಾ?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


