ಅಗರ್ತಲಾ: ಇನ್‌ಸ್ಟಾಗ್ರಾಮ್ ಮೂಲಕ ಎಂಟು ತಿಂಗಳ ಹಿಂದೆ ಪರಿಚಯವಾದ ಕರ್ನಾಟಕದ ಯುವಕನನ್ನು ಭೇಟಿಯಾಗಲು ಗಡಿ ದಾಟಿ ಬಂದಿದ್ದ ಬಾಂಗ್ಲಾದೇಶದ ಯುವತಿಯೊಬ್ಬಳನ್ನು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಬಂಧಿಸಲಾಗಿದೆ.
ಪ್ರಿಯತಮೆಯನ್ನು ಕಾಣಲು ಬಂದಿದ್ದ ಕರ್ನಾಟಕದ ದತ್ತ ಯಾದವ್ ಎಂಬಾತ • ತ್ರಿಪುರಾದಲ್ಲಿ ಕೂಡ ಜೈಲು ಪಾಲಾಗಿದ್ದಾನೆ. ಬಾಂಗ್ಲಾದ ಬೋಗುರಾ ಜಿಲ್ಲೆಯ ಜೈಲುಪಾಲು ಪಲ್ಲಾ ಗ್ರಾಮದ ಗುಲ್ಮಾನಾ ಅಬ್ರರ್ ಮತ್ತು ಯಾದವ್ ಮಧ್ಯೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು ಕ್ರಮೇಣ ಪ್ರೇಮಾಂಕುರವಾಗಿತ್ತು. ಅವರು ಸಾಕಷ್ಟು ಫೋಟೋಗಳನ್ನು ವಿನಿಮಯ ಮಾಡಿಕೊಂಡಿದ್ದು ವಿಡಿಯೋ ಕಾಲ್ ಮೂಲಕ ನಿರಂತರವಾಗಿ ಸಂಭಾಷಿಸುತ್ತಿದ್ದರು.
ಡಿಜಿಟಲ್ ಪ್ರಣಯ ಸಾಕಾಗದೇ ಮುಖತಃ ಭೇಟಿಯಾಗುವುದು ಅಗತ್ಯವೆಂದು ಇಬ್ಬರೂ ನಿರ್ಧರಿಸಿದ್ದರ ಫಲವಾಗಿ ಭಾರತಕ್ಕೆ ಬರಲು ಗುಲ್ತಾನಾ ಧೈರ್ಯ ತೋರಿದ್ದಳು. ಕೊನೆಗೂ ಪ್ರಿಯತಮ ದತ್ತಾನನ್ನು ಭೇಟಿಯಾಗುವ ಉತ್ಸಾಹದಿಂದ ಆಕೆ ಬುಧವಾರ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತ ಪ್ರವೇಶಿಸಿದ್ದಳು. ಆಕೆಯ ಈ ಪ್ರಯಾಣ ಅಪಾಯದಿಂದ ಕೂಡಿತ್ತು. ಆದರೆ, ‘ಪ್ರೀತಿಗೆ ಗಡಿಯೂ ಇಲ್ಲ, ಭಯವೂ ಇಲ್ಲ’ ಎಂಬ ನಾಣ್ಣುಡಿಯಂತೆ ಅವಳು ಅಂಜದೆ ಬಂದರೂ ಅವರ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಇಬ್ಬರೂ ಈಗ ತ್ರಿಪುರಾ ಜೈಲುಪಾಲಾಗಿದ್ದಾರೆ.
ಬಿಎಸ್‌ಎಫ್ ಕ್ರಮ: ಗುಲ್ತಾನಾ ಮತ್ತು ದತ್ತಾರ ಚಲನವಲನ ಕಂಡು ಎಚ್ಚೆತ್ತ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ, ಅಂತಾರಾಷ್ಟ್ರೀಯ ಪ್ರೇಮಿಗಳನ್ನು ಬಂಧಿಸಿ ಮಧುಪುರ ಪೊಲೀಸರಿಗೆ ಒಪ್ಪಿಸಿದ್ದರು. ಗುರುವಾರ ಇಬ್ಬರನ್ನೂ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ನಿ ಮೊಬೈಲ್ ಕದ್ದ ಕಳ್ಳರು; ಬಯಲಾಯಿತು ಹೆಂಡತಿಯ ಅಕ್ರಮ ಸಂಬಂಧ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


