Tuesday, November 3, 2026
spot_img
More
    spot_img
    HomeLatest newsಡಿಸೆಂಬರ್‌ ಒಳಗೆ 2 ಲಕ್ಷ ಪೋಡಿಗಳ ವಿತರಣೆ: ಕೃಷ್ಣ ಬೈರೇಗೌಡ

    ಡಿಸೆಂಬರ್‌ ಒಳಗೆ 2 ಲಕ್ಷ ಪೋಡಿಗಳ ವಿತರಣೆ: ಕೃಷ್ಣ ಬೈರೇಗೌಡ

    ಬೆಂಗಳೂರು: ಡಿಸೆಂಬರ್ ತಿಂಗಳ ಒಳಗೆ 2 ಲಕ್ಷ ಮಂಜೂರಿದಾರರಿಗೆ ಪೋಡಿಗಳನ್ನು ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

    ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಪೋಡಿಗಳನ್ನು ವಿತರಣೆ ಮಾಡಲು ಕೆಲವು ತಾಂತ್ರಿಕ ಕಾರಣಗಳು ಎದುರಾಗಿದ್ದವು. ಈಗ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅಂತಿಮವಾಗಿ 2 ಲಕ್ಷ ಪೋಡಿಗಳನ್ನು ವಿತರಣೆ ಮಾಡುವ ಗುರಿ ನಮದಾಗಿದೆ ಎಂದರು.

    2013-18ರಲ್ಲಿ 5800, 2018-2023ರಿಂದ 8500 ಪೋಡಿಗಳನ್ನು ವಿತರಣೆ ಮಾಡಲಾಗಿತ್ತು. ನಾವು ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ ಸಭೆ, ದಾಖಲಾತಿಗಳ ತಿದ್ದುಪಡಿ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಒಂದು ಹಂತಕ್ಕೆ ಬಂದಿದ್ದೇವೆ. ಹಿಂದೆ ಖಾಸಗಿಯವರಿಗೆ ಮಾತ್ರ ಪೋಡಿ ನೀಡಲಾಗಿತ್ತು ಎಂದು ತಿಳಿಸಿದರು.

    ಈ ಹಿಂದೆ ಏಕವ್ಯಕ್ತಿ ಪೋಡಿ ಪದ್ದತಿ ಮತ್ತು ಅರ್ಜಿ ಕೊಟ್ಟವರಿಗೆ ಮಾತ್ರ ಪೋಡಿ ವಿತರಿಸುವ ವ್ಯವಸ್ಥೆ ಇತ್ತು. ಯಾರಿಗೆ ಅರ್ಜಿ ಸಲ್ಲಿಸಲು ಸಾಮಥ್ರ್ಯವಿತ್ತೋ ಅಂಥವರಿಗೆ ಪೋಡಿಯನ್ನು ಕೊಡುತ್ತಿದ್ದವು. ಸಾಮಥ್ರ್ಯ ಇಲ್ಲದವರು ಪೋಡಿಯನ್ನೇ ಪಡೆಯುತ್ತಿರಲಿಲ್ಲ. ಇನ್ನು ಮುಂದೆ ಅರ್ಜಿ ಕೊಟ್ಟರೆ ಸಾಕು ಸರ್ಕಾರವೇ ಪೋಡಿಯನ್ನು ಕೊಡುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.

    73,390 ಸರ್ಕಾರಿ ಜಮೀನುಗಳಿಗೆ ಪೋಡಿ ನೀಡಲಾಗಿದೆ. ದತ್ತಾಂಶಗಳನ್ನು ಸಂಗ್ರಹಣೆ ಮಾಡಿಕೊಂಡು ಹಂತ ಹಂತವಾಗಿ ವಿತರಣೆ ಮಾಡುತ್ತಿದ್ದೇವೆ. ಈ ಹಿಂದೆ 1,17,000 ಪೋಡಿಗಳನ್ನು ಕೊಡಲಾಗಿತ್ತು. 1,33,000 ಬಾಕಿ ಇವೆ ಎಂದರು.

    ಸದಸ್ಯೆ ಹೇಮಲತಾ ನಾಯಕ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಗುವಳಿ ಚೀಟಿ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಸಾಗುವಳಿಚೀಟಿ ನೀಡಲಾಗುತ್ತಿತ್ತು. ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಗುವಳಿಚೀಟಿ ಪಡೆದುಕೊಳ್ಳುತ್ತಿದ್ದರು. ವಾಸ್ತವವಾಗಿ ಸಾಗುವಳಿಚೀಟಿ ಪಡೆಯಲು ಅವಕಾಶವೇ ಇಲ್ಲ ಎಂದು ಪುನರುಚ್ಚರಿಸಿದರು.


    ಸಾಗುವಳಿಚೀಟಿ ಇದ್ದು ಆರ್‍ಟಿಸಿ ಸಂಖ್ಯೆ ಇಲ್ಲದವರಿಗೆ ಅದನ್ನು ಸಹ ಡಿಸೆಂಬರ್‍ನೊಳಗೆ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದ

    ಕೆಲ ಸಮುದಾಯ, ಪಂಗಡಗಳ ಆಚರಣೆಯಿಂದ ಬಾಲ್ಯವಿವಾಹ ಹೆಚ್ಚು: ಲಕ್ಷ್ಮಿ ಹೆಬ್ಬಾಳ್ಕರ್‌

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search