Wednesday, May 13, 2026
spot_img
More
    spot_img
    HomeScienceಹಾರುವ ಕಾರು ಬರಲಿದೆ ! ಯಾವಾಗ ಗೊತ್ತೆ ?

    ಹಾರುವ ಕಾರು ಬರಲಿದೆ ! ಯಾವಾಗ ಗೊತ್ತೆ ?

    ಜಗತ್ತಿನ ಯಾವುದೇ ಪ್ರಮುಖ ನಗರವನ್ನು ತೆಗೆದುಕೊಳ್ಳಿ, ಟ್ರಾಫಿಕ್ ಜಾಮ್ ಅಲ್ಲಿಯ ಅತ್ಯಂತ ಪ್ರಮುಖ ಸಮಸ್ಯೆಗಳಲ್ಲೊಂದು. ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯುಳ್ಳ ನಗರಗಳಲ್ಲಿ ಬೆಂಗಳೂರಿಗೆ ಮೇಲಿನ ಸ್ಥಾನವು ಪ್ರತಿಬಾರಿಯೂ ಸಿಗುತ್ತದೆ! ಈ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಈ ಸಮಸ್ಯೆಗೆ ದೀರ್ಘಕಾಲದಲ್ಲಿ ಸಿಗಬಹುದಾದ ಒಂದು ಅತ್ಯುತ್ತಮ ಪರಿಹಾರವೆಂದರೆ ಹಾರುವ ಕಾರುಗಳು!

    ಇದು ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ ಸುಮಾರು ಐದು ಲಕ್ಷ ಹಾರುವ ಕಾರುಗಳು ನಮ್ಮ ಸೂರಿನ ಮೇಲೆ ಹಾರಾಡುವ ಸಾಧ್ಯತೆಗಳಿವೆ. ಇದನ್ನು ಎಲೆಕ್ಟ್ರಿಕ್ ಬ್ಯಾಟರಿಯಿಂದಲೂ ಓಡಿಸಬಹುದು. ಈ ಹಾರುವ ಕಾರನ್ನು ಕೇವಲ 45 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.

    ಹಾರುವ ಕಾರುಗಳಲ್ಲಿ ಮುಖ್ಯವಾಗಿ ಮೂರು ಬಗೆಗಳಿವೆ. VTOL: ‘VTOL’ ಎಂದರೆ ‘ವರ್ಟಿಕಲ್ ಟೇಕ್ ಆಫ್ ಆಯಂಡ್ ಲ್ಯಾಂಡಿಂಗ್’. ಇದಕ್ಕೆ ರನ್‌ವೇ ಬೇಡ; ಹೆಲಿಕಾಪ್ಟರ್ ತರಹವೇ ನಿಂತಲ್ಲಿಂದಲ್ಲೇ ಹಾರಬಲ್ಲದು. ಜೊಬಿ ಏವಿಯೇಷನ್‌ ಕಂಪನಿಯ ಎಸ್-4 ಮಾದರಿಯು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನವನ್ನು ಒಳಗೊಂಡಿದ್ದು ಒಂದೇ ಒಂದು ಚಾರ್ಜ್‌ನಲ್ಲಿ ಸುಮಾರು 240 ಕಿ.ಮೀ. ಕ್ರಮಿಸಬಲ್ಲದು.

    ಈ ಹಾರುವ ಕಾರಿಗೆ ಈಗಾಗಲೇ ದುಬೈ ನಗರವು ಲೀಲಾಜಾಲವಾಗಿ ಹಾರಾಡಲು ಒಪ್ಪಿಗೆ ನೀಡಿದೆ. ಕೆಲವೊಂದು ಫ್ಲೈಯಿಂಗ್ ಕಾರುಗಳಲ್ಲಿ ಪಾರಂಪರಿಕವಾದ ಎಂಜಿನನ್ನು ಅಳವಡಿಸಲಾಗಿರುತ್ತದೆ. ನಿಲುಗಡೆಗೆ ಕಾರುಗಳಷ್ಟು ಸಣ್ಣ ಜಾಗ ಸಾಕಾಗದು; ಹೆಲಿಕಾಪ್ಟರ್‌ನಷ್ಟು ವಿಶಾಲವಾದ ಬಯಲೂ ಬೇಡ. ಕಾರಿಗಿಂತ ದುಬಾರಿ, ಹೆಲಿಕಾಪ್ಟರ್‌ಗಿಂತ ಕಡಿಮೆ‌ ಬೆಲೆ. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ ಐದು ಲಕ್ಷ ಹಾರುವ ಕಾರುಗಳು ಬರಲಿವೆ.

    ,ಅಂಬಾನಿ ರಿಫೈನರಿ ಮೇಲೆ ದಾಳಿ ಬೆದರಿಕೆ ಹಾಕಿದ ಪಾಕ್ ಮನೀರ್ ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading