ಅಮೆರಿಕ ಕೂಡ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬೆನ್ನಲ್ಲೇ ಭಾರತದ ವಿರುದ್ಧ ಬೆದರಿಕೆ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ನಿಂತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಮುನೀರ್ ಮಾತಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಈ ಪರಮಾಣು ಗೊಡ್ಡು ಬೆದರಿಕೆಗೆ ಭಾರತ ಜಗ್ಗುವುದಿಲ್ಲ ಎಂದಿದೆ. ಇದೇ ವೇಳೆ ಅಸೀಮ್ ಮುನೀರ್, ಮುಕೇಶ್ ಅಂಬಾನಿಯ ಇಂಧನ ರಿಫೈನರಿ ಘಟಕದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿರುವುದಾಗಿ ವರದಿಯಾಗಿದೆ.
ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ಆರ್ಥಿಕ ಸಂಪನ್ಮೂಲದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದೆ. ಭಾರತದ ಹಾಗೂ ಅಮೆರಿಕ ಸಂಬಂಧ ಹಳಸಿದೆ. ಇಷ್ಟೇ ಅಲ್ಲ ಭಾರತದ ಮೇಲೆ ಹಿಡಿತ ಸಾಧಿಸುವ, ಭಾರತದ ಆರ್ಥಿಕತೆಯನ್ನು ಸಂಕುಚಿತಗೊಳಿಸುವ ಅಮೆರಿಕ ಪ್ರಯತ್ನ ಯಶಸ್ವಿಯಾಗುತ್ತಿಲ್ಲ. ಹೀಗಾಗಿ ಪಾಕಿಸ್ತಾನವನ್ನು ದಾಳವಾಗಿ ಬಳಸಿಕೊಳ್ಳಲು ಅಮೆರಿಕ ಮುಂದಾಗಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿ ಮಾಲೀಕತ್ವದ ಅತೀ ದೊಡ್ಡ ಆಯಿಲ್ ರಿಫೈನರಿ ಘಟಕವಿದೆ. ಇದು ಕರಾವಳಿ ತೀರ ಪ್ರದೇಶದಲ್ಲಿದೆ. ಈ ರಿಫೈನರಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಮುಂದೆ ಗಡಿಯಲ್ಲಿ ಕಿರಿಕ್ ಮಾಡಿದರೆ ಪಾಕಸ್ತಾನ ಭಾರತದ ಮೇಲೆ ನೇರ ದಾಳಿ ಮಾಡಲಿದೆ. ಭಾರತದ ಪೂರ್ವದಿಂದ ದಾಳಿ ಆರಂಭಿಸುತ್ತೇವೆ. ಇಲ್ಲಿ ಭಾರತದ ಅತ್ಯಂತ ಬೆಲೆ ಬಾಳುವ ಸಂಪನ್ಮೂಲವಿದೆ ಎಂದು ಅಸೀಮ್ ಮನೀರ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಭಾರತದ ಪೂರ್ವದಲ್ಲಿರುವ ಅತ್ಯಂತ ಮಹತ್ವಜ ಸಂಪನ್ಮೂಲ ಎಂದರೆ ಅದು ಮುಕೇಶ್ ಅಂಬಾನಿಯ ಜಾಮ್‌ನಗರ ರಿಫೈನರಿ ಘಟಕವಾಗಿದೆ.
,ಭಾರತೀಯ ರೈಲ್ವೆ ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ನೇಮಕಾತಿ: 434 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


