ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿರುವ ಅನಾಮಿಕ ದೂರುದಾರನ ಸಮ್ಮುಖದಲ್ಲಿ ನಿನ್ನೆ ಹಾಗೂ ಇಂದು ( ಆಗಸ್ಟ್ 13 ) ಎಸ್ಐಟಿ ಅಧಿಕಾರಿಗಳು 13ನೇ ಪಾಯಿಂಟ್ನ ಉತ್ಖನನ ಮಾಡಿದ್ದಾರೆ.
ಸ್ಥಳ ಮಹಜರು ನಡೆದಾಗ 13ನೇ ಪಾಯಿಂಟ್ನಲ್ಲಿ ಎಂಟಕ್ಕೂ ಹೆಚ್ಚು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಅನಾಮಿಕ ಭಾರೀ ಕುತೂಹಲ ಕೆರಳುವಂತೆ ಮಾಡಿದ್ದ. ಹೀಗಾಗಿ ಈ ಪಾಯಿಂಟ್ ಉತ್ಖನನದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.
ಎಸ್ಐಟಿ ಅಧಿಕಾರಿಗಳೂ ಸಹ ಈ ಜಾಗದ ಉತ್ಖನನಕ್ಕೂ ಮುನ್ನ ಜಿಪಿಆರ್ ತಂತ್ರಜ್ಞಾನ ಬಳಕೆ ಮಾಡಿ ಮೂಳೆಗಳಿಗಾಗಿ ಹುಡುಕಾಟ ನಡೆಸಿದರು. ಜಿಪಿಆರ್ನಲ್ಲಿ ಯಾವುದೇ ಮೂಳೆಗಳ ಅವಶೇಷ ಪತ್ತೆಯಾಗದ ಕಾರಣ ಎಸ್ಐಟಿ ಎರಡು ಹಿಟಾಚಿಗಳ ಮೂಳಕ 18 ಅಡಿ ಆಳ ಹಾಗೂ 25 ಅಡಿ ಅಗಲ ಗುಂಡಿ ಅಗೆಸಿ ಶೋಧ ಕಾರ್ಯ ನಡೆಸಿದೆ.
ಆದರೂ ಯಾವುದೇ ಮೂಳೆಗಳ ಅವಶೇಷ ಪತ್ತೆಯಾಗದೇ ಇದ್ದು, ಎಸ್ಐಟಿ ಅಧಿಕಾರಿಗಳು ಗುಂಡಿಯನ್ನು ಮುಚ್ಚಿಸಿದ್ದಾರೆ.
ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ರಾಜ್ಯದಲ್ಲಿ ಎಷ್ಟು ಮಂದಿ ಸಾವು? ಸಾರಿಗೆ ಸಚಿವರ ಮಾಹಿತಿ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


