ಬೆಂಗಳೂರು: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆ ಆರೋಪ ಮಾಡಿದ ಚಿನ್ನಯ್ಯ ಇದೀಗ ಜೈಲುಪಾಲಾಗಿದ್ದು, ಆತನ ಜಾಮೀನು ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಚಿನ್ನಯ್ಯ ಜೈಲು ಸೇರಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಯುಟ್ಯೂಬರ್ ಅಭಿಷೇಕ್, ಕೇರಳದ ಯುಟ್ಯೂಬರ್ ಮನಾಫ್, ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಟಿ ಅವರನ್ನು ಕರೆಸಿ ವಿಚಾರಣೆ ನಡೆಸಿದೆ.
ಒಂದೆಡೆ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಳ್ತಂಗಡಿ ಪೊಲೀಸರು ಸಮೀರ್‌ನನ್ನು ಧರ್ಮಸ್ಥಳದ ಕುರಿತಾಗಿ ಮಾಡಿದ ವಿಡಿಯೊ ಸಂಬಂಧ ವಿಚಾರಣೆ ನಡೆಸಿ, ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕ್ಯಾಮರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಹೀಗೆ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ ಸಮೀರ್ ಹಲವು ದಿನಗಳ ಬಳಿಕ ತಮ್ಮ ಖ್ಯಾತ ದೂತ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ತನಗೆ ಈ ವಿಡಿಯೊ ಮಾಡಲು ಹಣ ಬಂದಿದೆ ಎಂದು ಮಾಡುತ್ತಿರುವ ಆರೋಪವನ್ನು ತಳ್ಳಿಹಾಕಿದ ಸಮೀರ್ ತಾನೊಬ್ಬ ನಿಷ್ಠಾವಂತ ಯುಟ್ಯೂಬರ್ ಎಂಬುದನ್ನು ಮತ್ತೆ ಒತ್ತಿ ಹೇಳಿದ್ದಾರೆ.
ಅಲ್ಲದೇ ವಿಡಿಯೊ ಮಾಡುವ ಮುನ್ನ ಚಿನ್ನಯ್ಯನ ಕುರಿತು ಚೆನ್ನಾಗಿ ವಿಚಾರಿಸಿ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದೆ, ಮಾಹಿತಿ ಇಲ್ಲದೇ ಮಾಡಿದ ವಿಡಿಯೊ ಅದಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸುಜಾತಾ ಭಟ್ ಕುರಿತಾಗಿಯೂ ಸಹ ಮಾತನಾಡಿದ ಸಮೀರ್ ಎಂಡಿ ಅವರ ವಿಡಿಯೊವನ್ನು ಆಗಾಗಲೇ ತುಂಬಾ ಚಾನೆಲ್‌ಗಳಲ್ಲಿ ನೋಡಿದ್ದೆ, ಅವರ ಕಣ್ಣೀರು ನೋಡಿ ಓರ್ವ ಹೆತ್ತ ತಾಯಿ ಸುಳ್ಳು ಹೇಳಲು ಹೇಗೆ ಸಾಧ್ಯ ಎಂಬುದನ್ನು ನಂಬಿ ವಿಡಿಯೊ ಮಾಡಿದೆ. ಅದರ ನಂತರ ಮಾಧ್ಯಮದವರು ಅವರಿಗೆ ಏನೇನೊ ಪ್ರಶ್ನೆ ಕೇಳಿ ಅವರನ್ನು ಕಾಮಿಡಿ ಪೀಸ್ ಮಾಡಿದರು. ಓರ್ವ ತಾಯಿಯ ಕಣ್ಣೀರನ್ನು ನಂಬಿ ಇವರಿಗೆ ನ್ಯಾಯ ಸಿಗಬೇಕು ಎಂದು ವಿಡಿಯೊ ಮಾಡಿದೆ. ಆದರೆ ಆ ಕಣ್ಣೀರೇ ಸುಳ್ಳು ಎನ್ನುವುದಾದರೆ ನಾನು ಏನು ಮಾಡಲಿ ಎಂದು ಸಮೀರ್ ಬೇಸರ ಹೊರಹಾಕಿದರು.
ಮದ್ದೂರು: ಮುಸ್ಲಿಂ ಆಗಿರಲಿ, ಹಿಂದೂ ಆಗಿರಲಿ ಕ್ರಮ ಕೈಗೊಳ್ಳುತ್ತೇವೆ ಎಂದ ಪರಮೇಶ್ವರ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


