ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯನ್ನು ಪ್ರಸಾರ ಮಾಡಿದ್ದ ಯುಟ್ಯೂಬರ್ ಚಂದನ್ ಗೌಡ ವಿರುದ್ಧ ಮತ್ತೋರ್ವ ಯುಟ್ಯೂಬರ್ ಸುಮಂತ್ ಗಂಭೀರ ಆರೋಪ ಮಾಡಿದ್ದು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ಚಂದನ್ ಗೌಡ ವಿಡಿಯೊ ಮಾಡುತ್ತಿದ್ದಾರೆ, ಅವರಿಗೆ 50 ಲಕ್ಷ ಹಣ ಎಲ್ಲಿಂದ ಬಂತು ಎಂದೆಲ್ಲ ಹೇಳಿಕೆ ನೀಡಿದ್ದ.
ಈ ಹೇಳಿಕೆಯಿಂದ ಕೆರಳಿದ ಚಂದನ್ ಗೌಡ ಸುಮಂತ್ ಹೇಳುತ್ತಿರುವುದೆಲ್ಲ ಸುಳ್ಳು, ತಾನು ಎಲ್ಲಿ ಬೇಕಾದರೂ ಬರುತ್ತೇನೆ ಆರೋಪವನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದರು. ಅಲ್ಲದೇ ಸುಳ್ಳು ಹೇಳಿದ ಕಾರಣಕ್ಕೆ ಸುಮಂತ್ ವಿರುದ್ಧ ದೂರನ್ನೂ ಸಹ ದಾಖಲಿಸಿದ್ದರು.
ಇನ್ನು ಸುಮಂತ್ ತನ್ನ ಸ್ನೇಹಿತನೊಂದಿಗೆ ಚಂದನ್ ಗೌಡ ವಿರುದ್ಧದ ಆರೋಪ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಚಂದನ್ ಗೌಡ ಅವರನ್ನು ಸಿಕ್ಕಿ ಹಾಕಿಸಿದ್ದು ತಾನೇ ಎಂದು ಹೇಳಿಕೊಂಡಿದ್ದಾನೆ ಎನ್ನುವ ಆಡಿಯೊ ವೈರಲ್ ಆಗಿತ್ತು. ಈ ಆಡಿಯೊ ವೈರಲ್ ಆದ ಬಳಿಕ ಸುಮಂತ್ ಕುರಿತು ಜನರಲ್ಲಿ ಅನುಮಾನಗಳು ಮೂಡಲು ಆರಂಭವಾದವು.
ಹೀಗೆ ಸುಮಂತ್ ಆಡಿಯೊ ಎಂದು ಹಂಚಿಕೊಂಡಿದ್ದ ಅದೇ ಸ್ನೇಹಿತ ಸುಮಂತ್ ಜೊತೆ ಮಾತನಾಡಿದ್ದಾನೆ ಎನ್ನಲಾದ ಇನ್ನೊಂದು ಆಡಿಯೊವನ್ನು ರೆಬೆಲ್ ಟಿವಿ ಕನ್ನಡ ಯುಟ್ಯೂಬ್ ಚಾನೆಲ್ ಹಂಚಿಕೊಂಡಿದ್ದು, ಈ ಆಡಿಯೊದಲ್ಲಿ ಸುಮಂತ್ ಸ್ನೇಹಿತ ಎರಡು ಲಕ್ಷ ಕೊಟ್ಟರೆ ನಾನು ಸುಮ್ಮನಾಗಿಬಿಡುತ್ತೇನೆ ಎಂದು ನೀನು ನನ್ನ ಬಳಿ ಹೇಳಿದ್ದಿಯ ಎಂದು ಸುಮಂತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.
ಅಲ್ಲದೇ ಧರ್ಮಸ್ಥಳದಲ್ಲಿ ನನಗೆ ರಾಜ ಮರ್ಯಾದೆ ಸಿಗುತ್ತಿದೆ ಎಂದೂ ಸಹ ತಿಳಿಸಿದ್ದೆ, ಇಲ್ಲಿ ಯಾರು ದುಡ್ಡು ತಿಂದವರು ಎಂಬುದು ಗೊತ್ತಾಗಬೇಕು ಮಾತನಾಡಲು ಬಾ ಎಂದು ಸುಮಂತ್‌ಗೆ ಆಹ್ವಾನ ನೀಡಿದ್ದಾನೆ. ಆದರೆ ಇದೇ ಆಡಿಯೊದಲ್ಲಿ ಸುಮಂತ್ ಆ ಎಲ್ಲ ಆರೋಪವನ್ನು ತಿರಸ್ಕರಿಸಿದ್ದು, ತಾನು ಎರಡು ಲಕ್ಷ ಕೊಟ್ಟರೆ ಸುಮ್ಮನಾಗಿಬಿಡ್ತೀನಿ ಎಂದು ಹೇಳಿಲ್ಲ ಎಂದು ವಾದಿಸಿದ್ದಾನೆ.
ಆದರೆ ಸುಮಂತ್ ಸ್ನೇಹಿತ ಹಾಗೆ ಹೇಳಿದ್ದು ನಿಜ ಎಂದು ಮರು ವಾದಿಸಿದ್ದು, ನೀನು ಸೌಜನ್ಯ ತಾಯಿಗೂ ಸಹ ಕೆಟ್ಟದಾಗಿ ನಿಂದಿಸಿದ್ದೀಯ ಎಂದೂ ಸಹ ಆರೋಪಿಸಿದ್ದಾನೆ. ಈ ಮೂಲಕ ಸುಮಂತ್ ವಿರುದ್ಧ ಮತ್ತಷ್ಟು ಆರೋಪಗಳು ಕೇಳಿಬಂದಿದ್ದು, ಎದಕ್ಕೆಲ್ಲ ಸುಮಂತ್ ಯಾವ ರೀತಿಯ ಉತ್ತರ ನೀಡಲಿದ್ದಾನೆ ಕಾದು ನೋಡಬೇಕಿದೆ.
ಹಾಸನ ದುರಂತ: ಮೃತರ ಕುಟುಂಬಸ್ಥರಿಗೆ 5 ಲಕ್ಷ ಸಾಕಾಗಲ್ಲ ಇನ್ನೂ ಹೆಚ್ಚು ಪರಿಹಾರ ನೀಡಿ ಎಂದ ಅಶೋಕ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


