Saturday, November 7, 2026
spot_img
More
    spot_img
    HomeInternationalಲಂಡನ್:‌ ಸಿಖ್ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರಿಂದ ಅತ್ಯಾಚಾರ

    ಲಂಡನ್:‌ ಸಿಖ್ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರಿಂದ ಅತ್ಯಾಚಾರ

    ಲಂಡನ್: ಇಂಗ್ಲೆಂಡ್‍ನ ಓಲ್ಡ್‍ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ನಿಂದನೆ ಮಾಡಿದ್ದಾರೆ.

    ಅತ್ಯಾಚಾರ ನಡೆಸಿದ ದಾಳಿಕೋರರು ಮಹಿಳೆಗೆ ನಿಮ ಸ್ವಂತ ದೇಶಕ್ಕೆ ಹಿಂತಿರುಗಿ ಎಂದು ಬೆದರಿಕೆ ಹಾಕಿದ್ದಾರೆ. ಇದು ಭಾರತೀಯ ಮೂಲದ ವಲಸಿಗರ ಮೇಲೆ ನಡೆದ ಇದೇ ರೀತಿಯ ಘಟನೆಯನ್ನು ಪ್ರತಿಬಿಂಬಿಸುವ ಜನಾಂಗೀಯ ದಾಳಿಯಾಗಿದೆ. ಓಲ್ಡ್‍ಬರಿಯ ಟೇಮ್ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ.

    ಪೊಲೀಸರು ಇದನ್ನು ಜನಾಂಗೀಯವಾಗಿ ಉಲ್ಬಣಗೊಂಡ ದಾಳಿ ಎಂದು ಪರಿಗಣಿಸುತ್ತಿದ್ದಾರೆ. ಸಿಸಿಟಿವಿ ಮತ್ತು ವಿಧಿವಿಜ್ಞಾನ ವಿಚಾರಣೆಗಳು ನಡೆಯುತ್ತಿದೆ. ದಾಳಿಕೋರರನ್ನು ಪತ್ತೆಹಚ್ಚಲು ಸಹಾಯಕ್ಕಾಗಿ ಕೋರಿದ್ದಾರೆ. ದಾಳಿಕೋರರು ಜನಾಂಗೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಹಿಳೆ ನಮಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬರ್ಮಿಂಗ್ ಹ್ಯಾಮ್‍ಲೈವ್ ಶಂಕಿತರನ್ನು ಬಿಳಿ ಪುರುಷರು ಎಂದು ಗುರುತಿಸಿದೆ, ಒಬ್ಬ ತಲೆ ಬೋಳಿಸಿಕೊಂಡು ಗಾಢ ಬಣ್ಣದ ಸ್ವೆಟ್‍ಶರ್ಟ್ ಧರಿಸಿದ್ದರೆ, ಮತ್ತೊಬ್ಬ ಶಂಕಿತ ಬೂದು ಬಣ್ಣದ ಟಾಪ್ ಧರಿಸಿದ್ದರು ಎಂದು ವರದಿಯಾಗಿದೆ.

    ಈ ಘಟನೆಯು ಸ್ಥಳೀಯ ಸಿಖ್ ಸಮುದಾಯವನ್ನು ಕೆರಳುವಂತೆ ಮಾಡಿದೆ. ಇದು ಜನಾಂಗವನ್ನು ಗುರಿಯಾಗಿಸಿಟ್ಟುಕೊಂಡು ನಡೆಸಲಾದ ದಾಳಿ ಎಂದು ಪರಿಗಣಿಸಲಾಗಿದೆ.

    ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯನ್ನು ಖಂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹಿರಂಗ ಜನಾಂಗೀಯ ತಾರತಮ್ಯ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಎಂದು ಆತಂಕ ಹೊರಹಾಕಿದ್ದಾರೆ.

    ಇದು ತೀವ್ರ ಹಿಂಸಾಚಾರದ ಕೃತ್ಯವಾಗಿತ್ತು. ಆದರೆ ಜನಾಂಗೀಯವಾಗಿ ಉಲ್ಬಣಗೊಂಡ ಕೃತ್ಯವೆಂದು ಪರಿಗಣಿಸಲಾಗುತ್ತಿದೆ, ದುಷ್ಕರ್ಮಿಗಳು ಆಕೆಗೆ ಇಲ್ಲಿಗೆ ಸೇರಿದವಳಲ್ಲ ಎಂದು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಅವಳು ಇಲ್ಲಿಗೆ ಸೇರಿದವಳು. ನಮ ಸಿಖ್ ಸಮುದಾಯ ಮತ್ತು ಪ್ರತಿಯೊಂದು ಸಮುದಾಯಕ್ಕೂ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತ ಭಾವನೆ ಹೊಂದುವ ಹಕ್ಕಿದೆ. ಓಲ್ಡ್‍ಬರಿಯಲ್ಲಿ ಅಥವಾ ಬ್ರಿಟನ್‍ನಲ್ಲಿ ಎಲ್ಲಿಯೂ ಜನಾಂಗೀಯತೆ ಮತ್ತು ಸ್ತ್ರೀದ್ವೇಷಕ್ಕೆ ಸ್ಥಾನವಿಲ್ಲ ಎಂದು ಬರ್ಮಿಂಗ್‍ಹ್ಯಾಮ್ ಎಡ್?ಜಬಾಸ್ಟನ್‍ನ ಶಾಸಕರು ಹೇಳಿದರು.

    ಇಲ್ಫೋರ್ಡ್ ಸೌತ್‍ನ ಮತ್ತೊಬ್ಬ ಸಂಸದ ಜಾಸ್ ಅಥ್ವಾಲ್ ಇದನ್ನು ನೀಚ, ಜನಾಂಗೀಯ, ಸ್ತ್ರೀ ದ್ವೇಷಿ ದಾಳಿ ಎಂದು ಟೀಕಿಸಿದ್ದಾರೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸ್ಪಷ್ಟವಾಗಿರಲಿ, ಈ ದಾಳಿಯು ನಮ ದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಯ ಪರಿಣಾಮವಾಗಿದೆ ಮತ್ತು ಈಗ, ಒಬ್ಬ ಯುವತಿಯು ಜೀವನಪರ್ಯಂತ ಆಘಾತಕ್ಕೊಳಗಾಗಿದ್ದಾಳೆ ಎಂದು ಅವರು ಹೇಳಿದರು.

    ಒಂದು ತಿಂಗಳ ಹಿಂದೆ ವೊಲ್ವಹ್ರ್ಯಾಂಪ್ಟನ್‍ನ ರೈಲ್ವೆ ನಿಲ್ದಾಣದ ಹೊರಗೆ ಮೂವರು ಹದಿಹರೆಯದವರು ಇಬ್ಬರು ವೃದ್ಧ ಸಿಖ್ ಪುರುಷರ ಮೇಲೆ ಹಲ್ಲೆ ನಡೆಸಿದ ನಂತರ ಈ ದ್ವೇಷ ಅಪರಾಧ ನಡೆದಿದೆ. ಅವರನ್ನು ನೆಲದ ಮೇಲೆ ಕೆಡವಲಾಯಿತು, ದಾಳಿಕೋರರಲ್ಲಿ ಒಬ್ಬರು ಅವರನ್ನು ಇನ್ನೊಬ್ಬರು ಎಳೆದುಕೊಂಡು ಹೋಗುವವರೆಗೂ ಪದೇ ಪದೇ ಒದೆಯುತ್ತಿದ್ದರು. ದಾಳಿಯ ಸಮಯದಲ್ಲಿ ಸಿಖ್ ಪುರುಷರ ಪೇಟಗಳು ಕಳಚಿ ಬಿದ್ದಿವೆ.

    ಮುರಿದ ಮೂಳೆಗಳನ್ನು ಕೇವಲ 3 ನಿಮಿಷಗಳಲ್ಲಿ ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search