Monday, July 6, 2026
spot_img
More
    spot_img
    HomeLatest newsಧರ್ಮಸ್ಥಳ: ಚಿನ್ನಯ್ಯ ಒಂದು ಹೆಣ ಹೂಳಲು ಪಡೆಯುತ್ತಿದ್ದ ಹಣವೆಷ್ಟು? ಸ್ಪೋಟಕ ಹೇಳಿಕೆ ಕೊಟ್ಟ ವಿಠಲ ಗೌಡ

    ಧರ್ಮಸ್ಥಳ: ಚಿನ್ನಯ್ಯ ಒಂದು ಹೆಣ ಹೂಳಲು ಪಡೆಯುತ್ತಿದ್ದ ಹಣವೆಷ್ಟು? ಸ್ಪೋಟಕ ಹೇಳಿಕೆ ಕೊಟ್ಟ ವಿಠಲ ಗೌಡ

    ಬೆಂಗಳೂರು: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ ಚಿನ್ನಯ್ಯ ದೂರು ನೀಡಿದ ಬಳಿಕ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು.

    Advertisement

    ಚಿನ್ನಯ್ಯ ಹೇಳಿದ ಜಾಗಗಳಲ್ಲಿ ಉತ್ಖನನ ಕಾರ್ಯ ಮುಗಿದ ಬಳಿಕ ಸದ್ಯ ಚಿನ್ನಯ್ಯನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಯುಟ್ಯೂಬರ್‌ ಅಭಿಷೇಕ್‌, ಮನಾಫ್‌, ಸೌಜನ್ಯ ಪರ ಹೋರಾಟಗಾರರಾದ ಗಿರೀಶ್‌ ಮಟ್ಟಣ್ಣವರ್‌ ಹಾಗೂ ಜಯಂತ್‌ ಟಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.

    ಜತೆಗೆ ಸೌಜನ್ಯ ಮಾವ ವಿಠಲ ಗೌಡ ಸಹ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳು ವಿಠಲ ಗೌಡ ಹೇಳಿದ ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇನ್ನು ವಿಚಾರಣೆಯ ಬಳಿಕ ಡಿ ಟಾಕ್ಸ್‌ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದ ವಿಠಲ ಗೌಡ ಬಂಗ್ಲೆಗುಡ್ಡದಲ್ಲಿ ಅಸ್ತಿಪಂಜರದ ರಾಶಿಯೇ ಇತ್ತು ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.

    ಹೀಗೆ ಹೇಳಿಕೆ ನೀಡುವ ಮೂಲಕ ಭಾರೀ ಕುತೂಹಲ ಹುಟ್ಟುಹಾಕಿರುವ ವಿಠಲ ಗೌಡ ಕುಡ್ಲ ರಾಂಪೇಜ್‌ ಯುಟ್ಯೂಬ್‌ ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ಚಿನ್ನಯ್ಯನ ಕುರಿತ ಪರಿಚಯದ ಬಗ್ಗೆ ಮಾತನಾಡಿದ್ದಾರೆ.

    ಚಿನ್ನಯ್ಯ ತಮಗೆ 28 ವರ್ಷಗಳಿಂದ ಗೊತ್ತು, ಆತ ತಮ್ಮ ಅಂಗಡಿಗೆ ಟೀ ಕುಡಿಯಲು ಬರುತ್ತಿದ್ದ. ಚಿನ್ನಯ್ಯ ಮಾತ್ರವಲ್ಲ, ರಂಗ, ತಾನಾಸಿ, ಮಾರ ಹಾಗೂ ಸುಬ್ರಮಣ್ಯ ಸಹ ತಮ್ಮ ಅಂಗಡಿಗೆ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಆಗಿನಿಂದೂ ಚಿನ್ನಯ್ಯ ಪರಿಚಯವಿದ್ದು, ಚಿನ್ನಯ್ಯ ಹೆಣ ಹೂತಿದ್ದನ್ನು ತಾನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

    ಅಲ್ಲದೇ ಚಿನ್ನಯ್ಯ ತನ್ನ ಬಳಿ ಮಾತನಾಡುವಾಗ ಒಂದು ಹೆಣ ಹೂಳಲು 50 ರೂಪಾಯಿ ಹಣವನ್ನು ಮಾಹಿತಿ ಕೇಂದ್ರದಿಂದ ನೀಡುತ್ತಿದ್ದಾಗಿ ಸಹ ಹೇಳಿಕೊಂಡಿದ್ದ ಎಂದು ವಿಠಲ ಗೌಡ ತಿಳಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಅಂಗಡಿ ತೆರೆಯುತ್ತಿದ್ದರಿಂದ ರಸ್ತೆ ಬದಿ ಮಹಿಳೆಯರ ಹೆಣ ಬಿದ್ದಿರುವುದನ್ನು ಇವರು ಸಾಗಿಸುವುದನ್ನು ಕಂಡಿದ್ದೇನೆ ಎಂದೂ ಸಹ ವಿಠಲ ಗೌಡ ತಿಳಿಸಿದ್ದಾರೆ.

    ಹಾಸನ: ಗಣೇಶ ಮೆರವಣಿಗೆ ವೇಳೆ ಟ್ರಕ್‌ ನುಗ್ಗಿದ ಪ್ರಕರಣ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading