Friday, May 15, 2026
spot_img
More
    spot_img
    HomeLatest newsಕರೂರು ಕಾಲ್ತುಳಿತ ಪ್ರಕರಣ ಸಿಬಿಐಗೆ; ʼಟಿವಿಕೆ ವಿಜಯ್‌ ಅಲ್ಲ ಬಿಜೆಪಿ ವಿಜಯ್‌ʼ ಎಂದ ನೆಟ್ಟಿಗರು!

    ಕರೂರು ಕಾಲ್ತುಳಿತ ಪ್ರಕರಣ ಸಿಬಿಐಗೆ; ʼಟಿವಿಕೆ ವಿಜಯ್‌ ಅಲ್ಲ ಬಿಜೆಪಿ ವಿಜಯ್‌ʼ ಎಂದ ನೆಟ್ಟಿಗರು!

    ಹೊಸದಿಲ್ಲಿ: ತಮಿಳುನಾಡಿನ ಕರೂರು ಕಾಲ್ತುಳಿತ ದುರಂತ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ.

    ಕರೂರು ಕಾಲ್ತುಳಿತ ರಾಷ್ಟ್ರೀಯ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ಹೇಳಿದ ಸುಪ್ರೀಂಕೋರ್ಟ್‌ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದೆ.

    ಸೆಪ್ಟೆಂಬರ್.‌27ರಂದು ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್‌ ಅವರ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡ ಘಟನೆಯ ಬಗ್ಗೆ ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ.

    ದುರಂತದ ಬಗ್ಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂಕೋರ್ಟ್‌ ಮಾಜಿ ನ್ಯಾಯಾಧೀಶರಾದ ಅಜಯ್‌ ರಸ್ತೋಗಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಎನ್‌.ವಿ.ಅಂಜಾರಿಯಾ ಅವರ ಪೀಠವು ಆದೇಶಿಸಿದೆ.

    ಈ ಆದೇಶ ಹೊರಬೀಳುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದು, ಟಿವಿಕೆಗೆ ಬಿಜೆಪಿ ಬೆಂಬಲವಾಗಿ ನಿಂತಿದೆ ಎಂಬ ಟ್ವೀಟ್‌ಗಳು ಹರಿದಾಡುತ್ತಿವೆ. ಅಲ್ಲದೇ ವಿಜಯ್‌ ಬಟ್ಟೆಗೆ ಬಿಜೆಪಿ ಚಿಹ್ನೆ ಎಡಿಟ್‌ ಮಾಡಿ ವಿಜಯ್‌ ಟಿವಿಕೆಯಲ್ಲ, ಬಿಜೆಪಿ ಎಂದು ಕಾಲೆಳೆಯಲಾಗುತ್ತಿದೆ.

    ಇನ್ನು ಬಿಜೆಪಿಯ ಉಮಾ ಆನಂದನ್‌ ಮತ್ತು ಮಣಿ ಜಿಎಸ್‌ ಕರೂರು ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅರ್ಜಿ ಹಾಕಿದ್ದರು. ಇದೂ ಸಹ ಈ ರೀತಿಯ ಟ್ವೀಟ್‌ಗಳು ಹರಿದಾಡಲು ಕಾರಣವಾಗಿದ್ದು, ವಿಜಯ್‌ ಪರೋಕ್ಷವಾಗಿ ಬಿಜೆಪಿಗೆ ಬೆಂಬಲವಾಗಿದ್ದಾರೆ ಎಂದು ಟ್ರೋಲ್‌ಗಳು ವೈರಲ್‌ ಆಗುತ್ತಿವೆ.

    ಈರುಳ್ಳಿಯೊಳಗಿನ ಕಪ್ಪು ಪದರ ಲಿವರ್‌ಗೆ ವಿಷ! ತಿನ್ನುವ ಮೊದಲು ಈ ಪ್ರಮುಖ ವಿಚಾರ ತಿಳಿದುಕೊಳ್ಳಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading