ಹೈದರಾಬಾದ್: ಪುಷ್ಪ ದ ರೂಲ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.
ಇನ್ನು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಲು ತೆರಳಿದಾಗ ಹೈಡ್ರಾಮಾವೇ ನಡೆದಿದೆ. ಪೊಲೀಸರು ಕರೆದೊಯ್ಯಲು ಯತ್ನಿಸಿದಾಗ ಅಲ್ಲು ಅರ್ಜುನ್ ಪೊಲೀಸರಿಗೆ ನೀವು ನನ್ನನ್ನು ಬೆಡ್ರೂಂನಲ್ಲಿ ಬಂಧಿಸಿದ್ದೀರಾ, ತಿಂಡಿ ತಿನ್ನುವುದಕ್ಕಾದರೂ ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಬಂಧನ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದ್ದೇ ಎಂದಿದ್ದಾರೆ.
ಪುಷ್ಪ ಚಿತ್ರದ ಬಿಡುಗಡೆ ದಿನದ ಹಿಂದಿನ ದಿನ ರಾತ್ರಿ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಈ ಪ್ರದರ್ಶನಕ್ಕೆ ಅಲ್ಲು ಅರ್ಜುನ್ ಪೊಲೀಸರಿಗೂ ತಿಳಿಸದೇ ಆಗಮಿಸಿದ್ದರು. ಜನ ಕಿಕ್ಕಿರಿದು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಮಕ್ಕಳ ಜತೆ ಚಿತ್ರ ನೋಡಲು ಬಂದಿದ್ದ ರೇವತಿ ಎಂಬುವವರು ಮೃತಪಟ್ಟರೆ, ಪುತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ನಡೆದು ಒಂದು ದಿನ ಕಳೆದ ಬಳಿಕ ವಿಡಿಯೊ ಮಾಡಿ ವಿಶಾದ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್ ಮೃತ ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಧನ ಹಾಗೂ ಮಗನ ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


