Saturday, August 8, 2026
spot_img
More
    spot_img
    HomeLatest newsMakar Sankranti 2025: ಶನಿ ಮತ್ತು ರಾಹು ದೋಷವನ್ನು ನಿವಾರಿಸಲು ಯಾವ ವಸ್ತುಗಳನ್ನು ದಾನ ಮಾಡಬೇಕು?

    Makar Sankranti 2025: ಶನಿ ಮತ್ತು ರಾಹು ದೋಷವನ್ನು ನಿವಾರಿಸಲು ಯಾವ ವಸ್ತುಗಳನ್ನು ದಾನ ಮಾಡಬೇಕು?

    ಮಕರ ಸಂಕ್ರಾಂತಿಯ ದಿನ ದಾನ ಮಾಡುವ ಪರಂಪರೆ ರೂಢಿಯಲ್ಲಿದೆ.ಈ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ.ಗ್ರಹಗಳ ದೋಷವನ್ನು ತೊಡೆದುಹಾಕಲು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಕೆಲವು ವಸ್ತುಗಳನ್ನು ದಾನ ಮಾಡಲಾಗುತ್ತದೆ.ಸಂಕ್ರಾಂತಿ ಹಬ್ಬದ ವಿಶೇಷ ತಿನಿಸು ಎಂದರೆ ಎಳ್ಳು, ಬೆಲ್ಲ. ಭಾರತದಲ್ಲಿ ವಿವಿಧ ಹೆಸರಿನಲ್ಲಿ ಸಂಕ್ರಾಂತಿ ಹಬ್ಬವನ್ನುಸಿಹಿ ಹಂಚಿ ಸಂಭ್ರಮಿಸುತ್ತಾರೆ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವಿದೆ. ಶಾಸ್ತ್ರದ ಪ್ರಕಾರ ಸಂಕ್ರಾಂತಿಯಿಂದ ಉತ್ತರಾಯಣ ಕಾಲ ಪ್ರಾರಂಭವಾಗುವುದು.

    Advertisement

    ಮಕರ ಸಂಕ್ರಾಂತಿಯ ದಿನಾಂಕವನ್ನು ಹಿಂದೂ ಸೌರ ಕ್ಯಾಲೆಂಡರ್ ಪ್ರಕಾರ ನಿರ್ಧರಿಸಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿ ಮಾಘ ತಿಂಗಳ ಮೊದಲ ದಿನದಂದು ಬರುತ್ತದೆ. ಜನವರಿ 14 ರಂದು ಬೆಳಗ್ಗೆ 8:55 ಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಬೆಳಗ್ಗೆ 8:55 ರಿಂದ ಮಧ್ಯಾಹ್ನ 12:51 ರವರೆಗಿನ ಸಮಯವು ಸ್ನಾನ ಮತ್ತು ದಾನಕ್ಕೆ ಶುಭ ಸಮಯವಾಗಿರುತ್ತದೆ. ಆದರೆ ಬೆಳಗ್ಗೆ 8:55 ರಿಂದ 9:29 ರವರೆಗಿನ ಸಮಯವನ್ನು ಮಹಾಪುಣ್ಯ ಕಾಲವಾಗಿರುತ್ತದೆ. ಈ ಸಮಯದಲ್ಲಿ ಅಮೃತಕಾಲ ಇರುವುದರಿಂದ ಸ್ನಾನ ಮತ್ತು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

    ಬ್ರಹ್ಮ ಮುಹೂರ್ತ 2025ರ ಜನವರಿ 14, ಬೆಳಗ್ಗೆ 5:27 ರಿಂದ 6:21 ರವರೆಗೆ, ಅಮೃತ ಕಾಲದ ಶುಭ ಮುಹೂರ್ತ ಬೆಳಗ್ಗೆ 7:55 ರಿಂದ 9:29 ರವರೆಗೆ. ಈ ದಿನ ಶನಿ ದೋಷ ಇದ್ದವರಿಗೆ ಬಹಳ ಮುಖ್ಯವಾದ ದಿನವಾಗಲಿದೆ. ಅಂದರೆ ಮಕರ ಸಂಕ್ರಾಂತಿಯ ದಿನ ಶನಿ ದೋಷ ಇದ್ದವರು ಈ ವಸ್ತುಗಳನ್ನು ದಾನ ಮಾಡಿದರೆ ದೋಷ ನಿವಾರಣೆಯಾಗುತ್ತದೆ, ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಮಕರ ಸಂಕ್ರಾಂತಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂದು ತಿಳಿದುಕೊಳ್ಳೋಣ

    1.ಎಳ್ಳು
    ಮಕರ ಸಂಕ್ರಾಂತಿಯ ದಿನದಂದು ಎಳ್ಳನ್ನು ದಾನ ಮಾಡಬೇಕು.ಎಳ್ಳು ಶನಿ ದೇವನ ದೋಷ ನಿವಾರಣೆಗೆ ಬಳಸುವ ಪ್ರಮುಖ ಪದಾರ್ಥ.ಕಪ್ಪು ಎಳ್ಳು ದಾನ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಶನಿಯ ಸಾಡೇಸಾತಿಯಿಂದ ಬಳಲುತ್ತಿರುವವರು ಕಪ್ಪು ಎಳ್ಳನ್ನು ದಾನ ಮಾಡಬೇಕು.ಎಳ್ಳಿನ ದಾನವು ಶನಿಯ ಕೋಪದಿಂದ ಭಾಗಶಃ ಪರಿಹಾರವನ್ನು ನೀಡುತ್ತದೆ.

    2.ಬೆಲ್ಲ
    ಜ್ಯೋತಿಷ್ಯ ಶಾಸ್ತ್ರದಲ್ಲಿ, ಬೆಲ್ಲವು ಗುರು ಗ್ರಹದೊಂದಿಗೆ ಸಹ ಸಂಬಂಧಿಸಿದೆ.ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ.

    1. ಕಂಬಳಿ
      ಕಂಬಳಿಯನ್ನು ದಾನ ಮಾಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಸಂಕ್ರಾಂತಿಯ ದಿನದಂದು ಕಂಬಳಿಗಳನ್ನು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ.ಸಂಕ್ರಾಂತಿಯ ದಿನದಂದು ಬಡವರು, ನಿರ್ಗತಿಕರಿಗೆ ಕಂಬಳಿ ದಾನ ಮಾಡಿ.

    4,ಹಸುವಿನ ತುಪ್ಪ

    ಈ ದಿನದಂದು ತುಪ್ಪವನ್ನು ದಾನ ಮಾಡುವ ಜನರು ತಮ್ಮ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ ಮತ್ತು ಬಹಳಷ್ಟು ಹಣವನ್ನು ಗಳಿಸುತ್ತಾರೆ.ಈ ದಿನ ತುಪ್ಪವನ್ನು ದಾನ ಮಾಡಲು ಮರೆಯಬೇಡಿ ಸಂತೋಷ ಮತ್ತು ಸಮೃದ್ಧಿಯ ಮೂಲವಾದ ಗುರು, ತುಪ್ಪವನ್ನು ಪ್ರತಿನಿಧಿಸುತ್ತಾನೆ. ಹಸುವಿನ ಹಾಲಿನಿಂದ ಮಾಡಿದ ತುಪ್ಪವನ್ನು ಈ ದಿನ ದಾನ ಮಾಡಬೇಕು. ಇದನ್ನು ಮಾಡುವುದರಿಂದ, ಸೂರ್ಯ ದೇವರು ಮತ್ತು ಗುರು ಇಬ್ಬರ ಅಪಾರ ಆಶೀರ್ವಾದ ಪಡೆಯಬಹುದು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading