Friday, August 7, 2026
spot_img
More
    spot_img
    HomeTop Storyಮಕರ ಸಂಕ್ರಾಂತಿ ಹಬ್ಬಕ್ಕೆ ರುಚಿಯಾದ ಪಾಕವಿಧಾನಗಳು

    ಮಕರ ಸಂಕ್ರಾಂತಿ ಹಬ್ಬಕ್ಕೆ ರುಚಿಯಾದ ಪಾಕವಿಧಾನಗಳು

    ಸಂಕ್ರಾಂತಿ ಹಬ್ಬವು ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಕೃಷಿ ಆಧಾರಿತ ಹಬ್ಬವಾಗಿದ್ದು, ಭೂಮಿಗೆ, ಸೂರ್ಯನಿಗೆ ಮತ್ತು ಕೃಷಿಕರಿಗೆ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿ ದಿನವು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಇದರಿಂದ ಶೀತ ಋತುವು ಮುಗಿದು ವಸಂತ ಋತುವಿಗೆ ಪ್ರಾರಂಭವಾಗುತ್ತದೆ.ತಿಲ ಮತ್ತು ಬೆಲ್ಲವನ್ನು ಹಂಚುವ ಮೂಲಕ ಸ್ನೇಹ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಉದ್ದೇಶ ಇದರಲ್ಲಿ ಸೇರಿದೆ.ಹಳ್ಳಿಯ ಪ್ರದೇಶಗಳಲ್ಲಿ ಗೋವಿನ ಪೂಜೆಯನ್ನು ಸಂಕ್ರಾಂತಿ ದಿನ ವಿಶೇಷವಾಗಿ ಮಾಡಲಾಗುತ್ತದೆ, ಇದು ಕೃಷಿಕ ಜೀವನದ ಅವಿಭಾಜ್ಯ ಅಂಗವಾಗಿದೆ.

    Advertisement

    ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಕೂಡ ಒಂದಾಗಿದೆ.ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ,ಜನವರಿ 14 ರಂದು ಬೆಳಗ್ಗೆ 8:55 ಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಬೆಳಗ್ಗೆ 8:55 ರಿಂದ ಮಧ್ಯಾಹ್ನ 12:51 ರವರೆಗಿನ ಸಮಯವು ಸ್ನಾನ ಮತ್ತು ದಾನಕ್ಕೆ ಶುಭ ಸಮಯವಾಗಿರುತ್ತದೆ. ಆದರೆ ಬೆಳಗ್ಗೆ 8:55 ರಿಂದ 9:29 ರವರೆಗಿನ ಸಮಯವನ್ನು ಮಹಾಪುಣ್ಯ ಕಾಲವಾಗಿರುತ್ತದೆ. ಈ ದಿನ ಶನಿ ದೋಷ ಇದ್ದವರಿಗೆ ಬಹಳ ಮುಖ್ಯವಾದ ದಿನವಾಗಲಿದೆ.ಈ ಮಕರ ಸಂಕ್ರಾಂತಿಗೆ ಮನೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಮಾಡಬಹುದಾದ ಪಾಕವಿಧಾನಗಳು ಹೀಗಿವೆ

    ಅಕ್ಕಿ ಪಾಯಸ:

    ಅಕ್ಕಿಯನ್ನು ತೆಂಗಿನ ಹಾಲಿನಲ್ಲಿ ಬೇಯಿಸಿಕೊಳ್ಳಿ ನಂತರ ಗಟ್ಟಿಯಾದ ತೆಂಗಿನ ಹಾಲು ಬೆಲ್ಲವನ್ನು ಬೆಂದ ಅನ್ನಕ್ಕೆ ಸೇರಿಸಿ 5 ನಿಮಿಷ ಕುದಿಯಲು ಬಿಡಿ ಪ್ಯಾನ್ ಒಂದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ ನಂತರ ಕುದಿಯುತ್ತಿರುವ ಅನ್ನಕ್ಕೆ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿ, ಕೇಸರಿ ದಳವನ್ನು ಹಾಕಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ.

    ಪೊಂಗಲ್

    ಹೆಸರುಬೇಳೆಯನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಒಲೆಯ ಮೇಲಿಡಿ. ಕುದಿ ಬಂದಮೇಲೆ ಅಕ್ಕಿಯನ್ನು ತೊಳೆದು ಅದರಲ್ಲಿ ಹಾಕಿ. ಹುರಿದುಕೊಂಡ ಹೆಸರುಬೇಳೆಯನ್ನು ಅದರಲ್ಲಿ ಹಾಕಿ ಮೊಗಳು ಕೈಯಿಂದ ಕಲಸಿ ಮುಚ್ಚಳವನ್ನು ಮುಟ್ಟಿ ಅಕ್ಕಿ ಮತ್ತು ಹೆಸರುಬೇಳೆ ಬೆಂದಮೇಲೆ ಉಪ್ಪು ಆರಸಿನ ಪುಡಿ ಹಾಗೂ ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ ಪಾತ್ರೆಯನ್ನು ಕೆಳಗಿಳಿಸಿ. ಆಮೇಲೆ ಒಂದು ಬಾಣಲಿಯನ್ನು ಒಲೆಯ ಮೇಲಿಟ್ಟು ತುಪ್ಪವನ್ನು ಹಾಕಿ. ಕಾದಮೇಲೆ ಮೆಣಸು, ಜೀರಿಗೆ, ಗೋಡಂಬಿ ಚೂರುಗಳು, ಲವಂಗ ಹಾಕಿ ಹುರಿದು ಪೊಂಗಲ್ ನಲ್ಲಿ ಹಾಕಿ

    ಕ್ಯಾರೆಟ್ ಹಲ್ವಾ

    ತಾಜಾ ಕ್ಯಾರೆಟ್ ತೆಗೆದುಕೊಂಡು, ಸ್ವಚ್ಛವಾಗಿ ತೊಳೆದು ತುರಿಯಿರಿ.ಒಂದು ದೊಡ್ಡ ಕಡಾಯಿ ಅಥವಾ ಪ್ಯಾನ್ ತೆಗೆದು, ತುಪ್ಪವನ್ನು ಹಾಕಿ ತುರಿದ ಕ್ಯಾರೆಟ್ ಅನ್ನು ಹಾಕಿ 5-7 ನಿಮಿಷಗಳಷ್ಟು ಮಧ್ಯಮ ಉರಿಯಲ್ಲಿ ಹುರಿಯಿರಿ. ಹುರಿದ ಕ್ಯಾರೆಟ್‌ಗೆ ಹಾಲು ಸೇರಿಸಿ, ಚೆನ್ನಾಗಿ ಹುರಿಯಿರಿ. ಮಧ್ಯಮ ಉರಿಯಲ್ಲಿ ಬಾಡಿಸಿ, ಹಾಲು ಕಡಿಮೆಯಾಗುವವರೆಗೆ ಹುರಿಯುತ್ತಿರಬೇಕು,ನಂತರ ಕ್ಯಾರೆಟ್ ತುರಿಯಲ್ಲಿ ಪಕ್ಕಕ್ಕೆ ಇಟ್ಟಿರುವ ಹಾಲನ್ನು ಸೇರಿಸಿ ಮೂರ್ನಾಲ್ಕು ನಿಮಿಷ ಚೆನ್ನಾಗಿ ಕುದಿಯಲು ಬಿಡಿ. ನಂತರ ಅದರಲ್ಲಿ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಹತ್ತು ನಿಮಿಷ ಮಿಕ್ಸ್ ಮಾಡಿ, ಬೇಕಾದಷ್ಟು ಏಲಕ್ಕಿ ಪುಡಿ ಹಾಕಿ ಮತ್ತೆರಡು ನಿಮಿಷ ಚೆನ್ನಾಗಿ ಕಲಸಿ.ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಟೇಸ್ಟಿ ಕ್ಯಾರೆಟ್‌ ಹಲ್ವಾ ಸವಿಯಲು ರೆಡಿ.

    ಎಳ್ಳು ಬೆಲ್ಲ:

    ದೊಡ್ಡ ಕಡಾಯಿ ತೆಗೆದುಕೊಂಡು ಸ್ಟವ್ ಮೇಲೆ ಇಡಿ. ಅದು ಬಿಸಿ ಆಗುತ್ತಿದ್ದಂತೆ ಸಿಪ್ಪೆಯೊಂದಿಗೆ ಕಡಲೆಕಾಯಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ.ಅದು ತಣ್ಣಗಾದ ಬಳಿಕ ಒಂದು ಬಟ್ಟೆ ತೆಗೆದುಕೊಂಡು ಹುರಿದ ಕಡಲೆಕಾಯಿ ಹಾಕಿ. ಬಟ್ಟೆಯನ್ನು ಕಟ್ಟಿ, ಒಂದು ಕೈಯಿಂದ ಬಿಗಿಯಾಗಿ ಹಿಡಿದು ಮತ್ತೊಂದು ಕೈಯಿಂದ ಕಡಲೆಬೀಜದ ಸಿಪ್ಪೆ ಹೋಗುವವರೆಗೂ ಉಜ್ಜಿ ನಂತರ ಕೊಬ್ಬರಿಯ ಮೇಲ್ಭಾಗದಲ್ಲಿರುವ ಕಂದು ಪದರ ತೆರೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದನ್ನು ಕೂಡ ಹುರಿದುಕೊಳ್ಳಿ ಇದಾದ ಬಳಿಕ ಬೆಲ್ಲವನ್ನು ಕೂಡ ಕೊಬ್ಬರಿ ಗಾತ್ರದಲ್ಲಿಯೇ ಸಣ್ಣ ಪೀಸ್‌ಗಳಾಗಿ ಮಾಡಿಟ್ಟುಕೊಳ್ಳಿ ಈಗ ಎಳ್ಳನ್ನು ಹುರಿದು, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿದರೆ ಎಳ್ಳು-ಬೆಲ್ಲ ಸವಿಯಲು ಸಿದ್ಧ

    ಸ್ವೀಟ್ ಪೊಂಗಲ್

    ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ. ಕುಕ್ಕರ್‌ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ. ಪ್ಯಾನ್‌ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ, ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು. ಈಗ ಸ್ವೀಟ್ ಪೊಂಗಲ್ ಸವಿಯಲು ಸಿದ್ಧ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading