ವಿಜಯಪುರ: ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ ಕುರಿತ ಪರ ವಿರೋಧ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅದರಲ್ಲೂ ವರದಿಯಲ್ಲಿದೆ ಎನ್ನಲಾದ ಜಾತಿವಾರು ಜನಸಂಖ್ಯೆ ಅಂಕಿಅಂಶ ಬಹಿರಂಗವಾದ ಬೆನ್ನಲ್ಲೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿಯನ್ನು ವಿರೋಧಿಸಲು ಆರಂಭಿಸಿವೆ. ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ನಿರೀಕ್ಷೆಯಂತೆ ಬಿಜೆಪಿ ನಾಯಕರು ವರದಿ ಅಂಶ ಅಧಿಕೃತವಾಗಿ ಬಯಲಾಗುವ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ವಿಜಯಪುರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಜಾತಿಗಣತಿ ವರದಿ ಬಗ್ಗೆ ಮಾತನಾಡಿದ್ದಾರೆ.
ಜಾತಿಗಣತಿ ಪ್ರಶ್ನೆ ಎದುರಾಗುತ್ತಿದ್ದಂತೆ ಸಮೀಕ್ಷೆಯೇ ಸರಿ ಇಲ್ಲ ಎಂದ ಯತ್ನಾಳ್ ಮುಸ್ಲಿಮರು ಜಾಸ್ತಿ ಇದಾರಲ್ಲ ಅವರನ್ನು ಅಲ್ಪಸಂಖ್ಯಾತರ ಪಟ್ಟಿಯಿಂದ ತೆಗೆದುಬಿಡಿ ಅವರು ಈಗ ಬಹುಸಂಖ್ಯಾತರು. ಲಿಂಗಾಯತರಲ್ಲಿ ಜಾತಿ ಒಡೆದಿದ್ದೀರಲ್ಲ ಮುಸ್ಲಿಮರಲ್ಲೂ ಅದೇ ರೀತಿ ಜಾತಿಗಳು ಬರುತ್ತವೆ. ಪಿಂಜಾರ, ಸುನ್ನಿ, ಮೊಹಮ್ಮದಿ ಎಂಬ ಜಾತಿಗಳು ಬರುತ್ತವೆ. ಅವುಗಳನ್ನೂ ಒಡೆಯಿರಿ, ಆಗ ಅವರೂ ಸಹ ಕಡಿಮೆಯಾಗ್ತಾರೆ ಎಂದು ಯತ್ನಾಳ್ ಕಿಡಿಕಾರಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


