ವಿಜಯಪುರ: ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡುತ್ತಿದ್ದೆ. ಮಾತಿನ ವೇಗದಲ್ಲಿ ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ತಪ್ಪಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತೆ ಆಗುತ್ತೆದೆ.ವಿಜಯಪುರದಲ್ಲಿ ಕಾಂಗ್ರೆಸ್ ಬಿಟ್ಟರೇ ಬೇರೆಯವರು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ಹತಾಶೆಯಾಗಿದ್ದಾರೆ. ಅವರಿಗೆ ಒಂದು ವಿಷಯ ಬೇಕಿದೆ ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದರು.
ಇಲ್ಲಿನ ಕಾಂಗ್ರೆಸ್ ನಾಯಕರಿಗೆ . ಒಂದು ಇಶ್ಯೂ ಬೇಕಿದೆ. ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಅಷ್ಟೇ. ಕಾಂಗ್ರೆಸ್ ನವರು ಮಾತ್ರ ವಿರೋಧ ಮಾಡ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡೋದು ಕಲಿಸಿಲ್ಲ. ರಾಮ, ಕೃಷ್ಣ, ಲಕ್ಷ್ಮೀ, ಸರಸ್ವತಿ ಅವಹೇಳನ ಮಾಡಿದಾಗ ಹೀಗೆ ಆಗಬೇಕಲ್ವಾ? ಇದೊಂದು ಸಂಚು ಎಂದು ಸಂಶಯ ವ್ಯಕ್ತಪಡಿಸಿದರು.
ಯತ್ನಾಳ್ ಮುಗಿಸಲು ಹೋದರೆ, ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. . ಇದರ ಹಿಂದೆ ಯಾರಿದ್ದಾರೆ ಎನ್ನುವುದು ಹೊರ ಬರುತ್ತದೆ. ಈ ಬಗ್ಗೆ ಎನ್ ಐ ಎ ತನಿಖೆಯಾಗಲಿ. ಸುದ್ದಿಗೋಷ್ಟಿ ಮಾಡಿದವರು ಆಡಿಯೋ, ಹತ್ಯೆ ಸ್ಕೆಚ್ ಹಿಂದೆ ಇರೋದು. ನನ್ನ ಮುಗಿಸೋಕೆ ಆಗಲ್ಲ. ನಮ್ಮಲ್ಲಿ ರಾಣಿ ಚೆನ್ನಮ್ಮ, ರಾಯಣ್ಣ ರಕ್ತ ಇದೆ. ಹೀಗೆ ಮುಂದುವರೆದರೆ ನಮ್ಮವರು ಹೋರಾಟಕ್ಕೆ ಮುಂದಾಗ್ತಾರೆ ಎಂದು ಎಚ್ಚರಿಕೆ ಕೊಟ್ಟರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


