ಬೆಂಗಳೂರು;”ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ಗಾದೆ ಮಾತು ತಲೆ ತಲಾಂತರಗಳಿಂದಲೂ ಪ್ರಸಿದ್ಧವಾಗಿದೆ. ಮದುವೆಯನ್ನು ಯಶಸ್ವಿಯಾಗಿ ಮಾಡುವುದು ಮತ್ತು ಮನೆ ಕಟ್ಟುವುದು ಎಷ್ಟು ಕಷ್ಟದ ಕೆಲಸವೆಂದು ಇದನ್ನು ಅನುಭವಿಸಿದವರಿಗೇ ಗೊತ್ತು. ಮುಂಚಿತವಾಗಿ ಹಾಕಿರುವ ಬಜೆಟ್‌ಗಿಂತ ಹೆಚ್ಚು ಖರ್ಚಾಗುವುದು ಮದುವೆ ಮತ್ತು ಮನೆ ಸಂಬಂಧಿತ ಸಂದರ್ಭಗಳಲ್ಲಿ ಸಾಮಾನ್ಯವಾಗಿದೆ. ವಿಶೇಷವಾಗಿ ಕೆಲ ನಗರಗಳಲ್ಲಿ ಕಲ್ಯಾಣ ಮಂಟಪ, ಊಟದ ವೆಚ್ಚಗಳು ಅತಿಯಾದ ಮಟ್ಟಕ್ಕೆ ಏರಿವೆ. ಮದುವೆಯನ್ನು ಸ್ವಲ್ಪ ಅದ್ಧೂರಿಯಾಗಿ ಮಾಡಬೇಕೆಂದರೆ ಖರ್ಚು ಮತ್ತಷ್ಟು ಹೆಚ್ಚಾಗುತ್ತದೆ.ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳ ಮದುವೆಯನ್ನು ವೈಭವವಾಗಿ ನಡೆಸುವ ಆಸೆಯಿರುತ್ತದೆ. ಆದರೆ ಈ ದಿನಗಳ ದುಬಾರಿ ಬದುಕಿನಲ್ಲಿ ಮಧ್ಯಮವರ್ಗದ ಪೋಷಕರಿಗೆ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದ ಮದುವೆ ಖರ್ಚು ಪೂರೈಸಲು ಅವರು ದೂರದೂರಿಗೆ ಚಿಂತಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಪೋಷಕರ ಕನಸು ಸಾಕಾರಗೊಳಿಸಲು ಇತ್ತೀಚೆಗೆ ಹೊಸ ಟ್ರೆಂಡ್‌ವೊಂದು ಆರಂಭವಾಗಿದೆ .ಅದು “Marry Now, Pay Later”. ವೆಡ್ಡಿಂಗ್ ಪ್ಲಾನರ್‌ಗಳು ಈಗ ಇಎಂಐ(EMI) ಆಧಾರದ ಮೇಲೆ ಮದುವೆ ಆಯೋಜನೆ ಮಾಡುವ ಸೌಲಭ್ಯ ನೀಡುತ್ತಿದ್ದಾರೆ, ಇದು ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಈಗ ಹೊಸ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ EMI ಮದುವೆ!ಇತ್ತೀಚೆಗೆ ಮದುವೆ ಮಾಡೋದು ಮಧ್ಯಮ ವರ್ಗ ಕುಟುಂಬಗಳಿಗೆ ದೊಡ್ಡ ಹೊಣೆಗಾರಿಕೆಯಾಗಿದ್ದು, ದುಬಾರಿ ವೆಚ್ಚದ ನಡುವೆಯೂ ಸಂತಸದ ಕ್ಷಣಗಳನ್ನು ಹೇಗೆ ಆಚರಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ, ವಿವಾಹದ ಕನಸು ನಿಜವಾಗಿಸಲು ‘Marry Now, Pay Later’ ಎಂಬ ಹೊಸ ಟ್ರೆಂಡ್ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ.ಮದುವೆಗೆ ಬೇಕಾದ ಹಣವನ್ನು ಏರ್ಪಡಿಸಲು ಸಾಧ್ಯವಾಗದೆ ಒತ್ತಡದಲ್ಲಿದ್ದ ವಧು-ವರರು ಮತ್ತು ಪೋಷಕರಿಗೆ ಈಗ ಹೊಸ ಅವಕಾಶ ಲಭ್ಯವಾಗಿದೆ.ಅದು EMIನಲ್ಲಿ ಮದುವೆ ಆಯ್ಕೆ. ವೆಡ್ಡಿಂಗ್ ಪ್ಲಾನರ್‌ಗಳು ಇದೀಗ “Marry Now, Pay Later” ಎಂಬ ತಂತ್ರದ ಮೂಲಕ ಇಎಂಐ ಆಧಾರದ ಮದುವೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಯೋಜನೆಯಡಿ, ಕೆಲ ಅಗತ್ಯ ಡಾಕ್ಯುಮೆಂಟ್‌ಗಳನ್ನು ಪಡೆದು ಗ್ರಾಹಕರಿಗೆ ಮದುವೆಗಾಗಿ ಬೇಕಾಗುವ ಮೊತ್ತವನ್ನು ನೀಡಲಾಗುತ್ತದೆ. ಸದ್ಯ ಈ EMI ಮ್ಯಾರೇಜ್ ಕಾನ್ಸೆಪ್ಟ್ ಹೊಸದಾಗಿರುವುದರಿಂದ ಕೆಲವು ಪ್ಲಾನರ್‌ಗಳು 0% ಬಡ್ಡಿದರದ EMI ಆಯ್ಕೆಯನ್ನೇ ನೀಡುತ್ತಿದ್ದಾರೆ. ಇದರಿಂದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪ್ಲಾನರ್‌ಗಳು ವಿಭಿನ್ನ ಆಫರ್‌ಗಳನ್ನು ರೂಪಿಸಿದ್ದಾರೆ.ಕೆಲವೆಡೆ 24 ತಿಂಗಳವರೆಗೆ EMI ಪಾವತಿಸಲು ಅವಕಾಶವಿದೆ. ಹಾಗೆಯೇ ಪ್ರತಿಯೊಂದು ವೆಡ್ಡಿಂಗ್ ಪ್ಲಾನರ್ ತಮ್ಮದೇ ಆದ EMI ಪ್ಯಾಕೇಜ್, ಕಾಲಾವಕಾಶ ಹಾಗೂ ಷರತ್ತುಗಳನ್ನು ನಿಗದಿಪಡಿಸುತ್ತಿದ್ದಾರೆ. ಕೆಲವು ಪ್ಲಾನರ್‌ಗಳು ಸಾಲ ನೀಡುತ್ತಿದ್ರೆ, ಇನ್ನು ಕೆಲವು ಫೈನಾನ್ಷಿಯಲ್ ಕಂಪನಿಗಳ ಅಥವಾ ಬ್ಯಾಂಕ್‌ಗಳ ಸಹಯೋಗದಿಂದ ಈ ಸೌಲಭ್ಯ ಒದಗಿಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


