ಲಂಡನ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಂದು ಭಾರತ ಇಂಗ್ಲೆಂಡ್ ನೀಡಿರುವ 193 ರನ್‌ಗಳ ಗುರಿಯನ್ನು ಬೆನ್ನಟ್ಟುವ ಯತ್ನ ಮಾಡಿದ್ದು, ತಂಡದ ಪರ ಆಧಾರಸ್ತಂಭವಾಗಿದ್ದ ಕೆಎಲ್ ರಾಹುಲ್ ಸಹ ವಿಕೆಟ್ ಒಪ್ಪಿಸುವ ಮೂಲಕ ಇದೀಗ ಪಂದ್ಯ ಮತ್ತಷ್ಟು ರೋಚಕ ಹಂತ ತಲುಪಿದೆ.
ಕೆಎಲ್ ರಾಹುಲ್ ಔಟ್ ಆದ ಸಮಯಕ್ಕೆ ಭಾರತ 81 ರನ್‌ಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ಗೆಲ್ಲಲು ಇನ್ನೂ 112 ರನ್‌ಗಳು ಬೇಕಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ ಡಕ್‌ಔಟ್, ಕರುಣ್ ನಾಯರ್ 14, ಶುಭ್‌ಮನ್ ಗಿಲ್ 6, ಆಕಾಶ್ ದೀಪ್ 1, ರಿಷಭ್ ಪಂತ್ 9 ರನ್ ಕಲೆಹಾಕಿದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯವಿದ್ದ ಕೆಎಲ್ ರಾಹುಲ್ 39 ರನ್ ಗಳಿಸಿದ್ದಾರೆ.
ಸದ್ಯ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಕಣದಲ್ಲಿದ್ದು, ನಿತಿಶ್ ಕುಮಾರ್ ರೆಡ್ಡಿ ಇನ್ನೂ ಕಣಕ್ಕಿಳಿಯಬೇಕಿದೆ. ಉಳಿದಂತೆ ಸಿರಾಜ್ ಹಾಗೂ ಬುಮ್ರಾ ಬ್ಯಾಟಿಂಗ್ ಬಾಕಿಯಿದೆ.
ಮೈಸೂರು ನಗರ ಪೊಲೀಸರಿಂದ ಬೃಹತ್ ಕಾರ್ಯಾಚರಣೆ; 63 ಲಕ್ಷ ಮೌಲ್ಯದ ಕಳವು ಸ್ವತ್ತು ವಶ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


