ಬೆಂಗಳೂರು: ಧರ್ಮಸ್ಥಳ ಭಾಗದಲ್ಲಿ ಶವಗಳನ್ನು ಹೂತ್ತಿಟ್ಟಿರುವುದಾಗಿ ಹೇಳುತ್ತಿರುವ ವ್ಯಕ್ತಿ ಮತಾಂತರಗೊಂಡಿದ್ದಾನೆ ಎಂಬ ವದಂತಿಗಳಿವೆ. ಆತನ ಹಿನ್ನೆಲೆಯ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ವಿಧಾನಸಭೆಯ ಚರ್ಚೆಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಭಾಗದಲ್ಲಿ ಹೂತ್ತಿಟ್ಟಿರುವ ಶವಗಳನ್ನು ತೋರಿಸುವುದಾಗಿ ಹೇಳುತ್ತಿರುವ ಮಾಸ್ಕ್ ಮ್ಯಾನ್ ಯಾರು ಆತನ ಹೆಸರು ಏನು? ಭೀಮ ಎಂದು ಹೇಳಲಾಗುತ್ತಿದೆ. ಆದರೆ ಅದು ಆತನ ನಿಜವಾದ ಹೆಸರಲ್ಲ. ಮೂಲ ಹೆಸರು ಚೆನ್ನಯ್ಯ ಎನ್ನಲಾಗುತ್ತಿದೆ. ಮತಾಂತರಗೊಂಡ ವ್ಯಕ್ತಿ ಎನ್ನಲಾಗುತ್ತಿದೆ ಎಂದು ಹೇಳಿದರು.
ನಮಗೂ ಇಲ್ಲದಷ್ಟು ಭದ್ರತೆಯನ್ನು ಸರ್ಕಾರ ಅತನಿಗೆ ನೀಡಲಾಗುತ್ತಿದೆ. ದಿನ ಬೆಳಗಾದರೆ ಪೊಲೀಸರು ಆತನಿಗೆ ಮೇಕಪ್ ಮಾಡಿ, ಬಿರಿಯಾನಿ ಕೊಡಿಸಿ ಕರೆ ತರುತ್ತಿದ್ದಾರೆ. ಆತ ತೋರಿಸಿದ ಜಾಗವನ್ನೆಲ್ಲ ಅಗೆಯಲಾಗುತ್ತಿದೆ. ಸಾಮಾನ್ಯ ಜ್ಞಾನ ಬಳಸಬಾರದೆ. ಯಾರಾದರೂ 20 ಅಡಿ ಆಳ ಅಗೆದ್ದು ಹೆಣ ಹೂಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮಾಸ್ಕ್ ಮ್ಯಾನ್ 20 ವರ್ಷಗಳ ಹಿಂದೆ ವಿಕ್ರಮ್ ಬೇತಾಳನ ಮಾದರಿಯಲ್ಲಿ ಹೆಣವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ ಹೂಳಿದನೆಯೇ ? ಆತನಿಗೆ ಯಾವ ಪ್ರಾಣಿಗಳು ಕಚ್ಚಿಲ್ಲವೇ ? ಅಷ್ಟು ಶವಗಳನ್ನು ಒಬ್ಬನೇ ಹೂತ್ತಿಟ್ಟಿದ್ದಾನೆಯೇ ಎಂದು ಪ್ರಶ್ನಿಸಿದರು.
ಎಸ್ಐಟಿಯನ್ನು ಇಲ್ಲಿಗೆ ನಿಲ್ಲಿಸಬಾರದು, ಆತನ ಹಿನ್ನೆಲೆಯ ಬಗ್ಗೆಯೂ ತನಿಖೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಧರ್ಮಸ್ಥಳದಲ್ಲಿ ಅಗೆಯಲಾಗಿರುವ ಗುಂಡಿಗಳನ್ನು ಮುಚ್ಚಬೇಡಿ. ಕೃಷಿ ಹೊಂಡಗಳನ್ನಾಗಿ ಪರಿವರ್ತಿಸಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಾದರೂ ಅಲ್ಲಿ ನಿಲ್ಲಲಿ ಎಂದರು.
ಮಾಸ್ಕ್ ಮ್ಯಾನ್ ಯಾರು? ಕಳ್ಳನ- ಸುಳ್ಳನಾ ? ಹಿಂದೆ ಆತ ಏನು ಮಾಡುತ್ತಿದ್ದ ? ಎಂಬುದು ಪತ್ತೆ ಮಾಡಬೇಕು. ಸೌಜನ್ಯ ಕೊಲೆ ಪ್ರಕರಣವನ್ನು ಇನ್ನೂ ಯಾವ ರೀತಿಯಲ್ಲಾದರೂ ತನಿಖೆ ಮಾಡಿ, ನಮ್ಮ ಬೆಂಬಲ ಇದೆ. ಆದರೆ ಆ ನೆಪದಲ್ಲಿ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಬೇಡಿ ಎಂದು ಆಗ್ರಹಿಸಿದ್ದರು.
ಹಿಂದೂ ಧಾರ್ಮಿಕ ಸ್ಥಳಗಳಿಗೆ ಅಪಾಯ ಮಾಡುವ ಈ ಮೂಲಕ ಹಿಂದೂ ಧರ್ಮಕ್ಕೆ ಧಕ್ಕೆ ಉಂಟು ಮಾಡುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ. ತಿರುಪತಿ, ಶಬರಿಮಲೆ, ಶನಿ ಸಿಂಗೇಲೇಶ್ವರ ಸೇರಿದಂತೆ ಹಲವು ಶ್ರದ್ದಾ ಕೇಂದ್ರಗಳ ಮೇಲೆ ಈ ರೀತಿಯ ಸಂಚು ನಡೆದಿತ್ತು. ಈಗ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರುವವರ ಬಗ್ಗೆಯೂ ತನಿಖೆ ಮಾಡಿ ಸತ್ಯವನ್ನು ಜನರಿಗೆ ತಿಳಿಸಲಿ ಎಂದರು.
ಪೊಲೀಸರು ತನಿಖೆಯಲ್ಲಿ ಸಾಮಾನ್ಯ ಪ್ರಜ್ಞೆ ಬಳಕೆ ಮಾಡಬೇಕು. ಸಂಚಿನ ಹಿಂದೆ ವಿದೇಶಿ ಹಣದ ಪ್ರಭಾವ ಕಂಡು ಬರುತ್ತಿದೆ ಹೀಗಾಗಿ ತನಿಖೆಯನ್ನು ಎನ್ಐಎಗೆ ವಹಿಸಿ ಎಂದು ಒತ್ತಾಯಿಸಿದರು.
ಹಿರಿಯ ಸದಸ್ಯ ಸುರೇಶ್ ಕುಮಾರ್, ಎಸ್ಐಟಿ ಮಧ್ಯಂತರ ವರದಿ ಪಡೆದು ವದ್ದಂತಿಗಳಿಗೆ ಕಡಿವಾಣ ಹಾಕಿ. ದ್ವೇಷ ಭಾಷಣ ಹಾಗೂ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು ಶಾಸಕರಾದ ಹರೀಶ್ ಪೂಂಜಾ ಮತ್ತಿತರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ `FIR’ ದಾಖಲು.!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


